ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಶಿವಸೇನಾ ಪಕ್ಷದ ಅಭ್ಯರ್ಥಿಯಾದ ಸೋಮಶೇಖರ್ ಉಮರಾಣಿ ಗದಗ,ಹಾವೇರಿ,ಉತ್ತರ ಕನ್ನಡ, ಧಾರವಾಡ ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಪದವೀಧರರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ತಮ್ಮ ಚಿಂತನೆಯ ಕುರಿತು ಪದವೀಧರ ಮತದಾರರಲ್ಲಿ ಮತಯಾಚನೆ ಮಾಡುತ್ತಿದ್ದಾರೆ.ಎಲ್ಲೆಡೆಯೂ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಗೆಲುವಿನ ವಿಶ್ವಾಸವನ್ನು ಸೋಮಶೇಖರ್ ಉಮರಾಣಿ ವ್ಯಕ್ತಪಡಿಸಿದ್ದಾರೆ.
ಪದವೀಧರ ಮತದಾರರ ಮನೆಗೆ ಹಾಗೂ ಕಚೇರಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
Kshetra Samachara
26/10/2020 03:38 pm