ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಯಾರಾದರೂ ಪದವೀಧರರ ಹಿತ ಕಾಪಾಡಿದ್ದಾರೆಯೇ?: ಗುರಿಕಾರ ಪ್ರಶ್ನೆ

ಧಾರವಾಡ: ಕಳೆದ ಮೂರು ದಶಕಗಳಿಂದ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ಸದಸ್ಯರು ಪದವೀಧರರ ಹಿತ ಕಾಪಾಡಿದ್ದಾರೆಯೇ? ಅಥವಾ ಬಲಿಷ್ಠ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆಯೇ? ಎಂದು ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಗುರಿಕಾರ ಪ್ರಶ್ನಿಸಿದರು.

ಪಶ್ಚಿಮ ಪದವೀಧರ ಕ್ಷೇತ್ರದ ವಿವಿಧೆಡೆ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು, ಪದವೀಧರರ ನಿರ್ಲಕ್ಷ್ಯ ದ, ಹಿನ್ನೆಲೆಯಲ್ಲಿಯೇ ನಾನು ಈ ಬಾರಿ ಸ್ಪರ್ಧೆ ಮಾಡಿದ್ದೇನೆ. ಮೊದಲ ಪ್ರಾಶಸ್ತ್ಯದ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಧಾರವಾಡ ಜಿಲ್ಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ ಈರಣ್ಣ ಮುರಗೋಡ ಮಾತನಾಡಿ, ಸಂಘಟನೆ, ಹೋರಾಟವನ್ನೇ ಜೀವನದ ಗುರಿಯಾಗಿಸಿಕೊಂಡ ಗುರಿಕಾರ ಅವರು ಇದೀಗ ಪದವೀಧರರ ಚುನಾವಣೆಗೆ ಸ್ಪರ್ಧಿಸಿದ್ದು ನಾವೆಲ್ಲರೂ ಅವರಿಗೆ ಬೆಂಬಲ ಸೂಚಿಸುತ್ತಿದ್ದೇವೆ.

ವಿಧಾನ ಪರಿಷತ್‌ಗೆ ಅನನ್ಯ ಇತಿಹಾಸವಿದ್ದು ಅಲ್ಲಿ ತಜ್ಞರೇ ಬೇಕು ಹೊರತು ರಾಜಕೀಯ ಮುಖಂಡರಲ್ಲ. ಹೀಗಾಗಿ ಗುರಿಕಾರ ಅವರನ್ನು ಆಯ್ಕೆ ಮಾಡಬೇಕಿದೆ.

ನಿರುದ್ಯೋಗಿ ಪದವೀಧರರ, ಸೇವೆಯಲ್ಲಿನ ನೌಕರರು, ಶಿಕ್ಷಕರ ಗುರುತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಗುರಿಕಾರ ಅವರು ಮುಂದೆ ಬಂದಿದ್ದು ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಎಂದು ಮನವಿ ಮಾಡಿದರು.

ನಂತರ ಬಸವರಾಜ ಗುರಿಕಾರ ಅವರು ಕುಂದಗೋಳ ತಾಲೂಕು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಪ್ರಚಾರ ಮಾಡಿದರು. ಎಸ್.ಕೆ. ರಾಮದುರ್ಗ, ಪಿ.ಬಿ. ನದಾಫ, ಜಿ.ಸಿ. ಅರಳಿ, ಜಿ.ಬಿ. ಕಂಬಳಿ, ಎನ್.ಎ.ನದಾಫ್, ಎಂ.ಎಂ. ಘೋರ್ಪಡೆ ಇದ್ದರು.

ಗುರಿಕಾರ ಪರವಾಗಿ ಅರುಣ್ ಮಾಂಡ್ರೆ, ಬಸವರಾಜ ಕೊಕ್ಕರಗುಂದಿ ತಂಡ ಬೆಳ್ಳಟ್ಟಿಯಲ್ಲಿ, ಅಲ್ಲದೇ ಶಿಗ್ಗಾಂವ, ಸವಣೂರು, ಬಂಕಾಪೂರ, ಕೊಟ್ಟಿಗೇರಿ, ಕುಂದೂರ, ಗುಡ್ಡದಚನ್ನಾಪೂರಗಳಲ್ಲಿ ನಡೆದ ಪ್ರಚಾರದಲ್ಲಿ ವಿನಾಯಕ, ವೀರಣ್ಣ, ಚೇತನ, ಚಂದ್ರಶೇಖರ ಮತ್ತಿತರರ ಇದ್ದರು.

ಜೊತೆಗೆ ರಾಣೆಬೆನ್ನೂರಿನಲ್ಲಿ ಗುರಿಕಾರ ಅವರು ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ಪ್ರಚಾರ ನಡೆಸಿದರು.

ಗದಗದಲ್ಲಿ ಬೆಳ್ಳಟ್ಟಿ ಕ್ಷೇತ್ರ, ಮತ್ತು ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ಎ.ಕೆ.ಮುಧೋಳ, ರವೀಂದ್ರಗೌಡ ಹಾಗೂ ಹಿರೇಹೂಳಿ, ಅರುಣ ಮಾಂಡ್ರೆ, ಬಸವರಾಜ ಕೊಕ್ಕರಗುಂದಿ, ಮಲ್ಲಿಕಾರ್ಜುನ ಕರಿಗಾರ, ಫಕ್ಕೀರೇಶ ಸೇರಿದಂತೆ ಇತರರು ಪ್ರಚಾರ ನಡೆಸಿದರು.

Edited By : Manjunath H D
Kshetra Samachara

Kshetra Samachara

22/10/2020 07:33 pm

Cinque Terre

26.52 K

Cinque Terre

6

ಸಂಬಂಧಿತ ಸುದ್ದಿ