ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪದವೀಧರರಿಗೆ ವೋಟ್ ಹಾಕಬೇಕಾದ್ರೇ ಉದ್ಯೋಗ ಬೇಕಂತೆ

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

ಕುಂದಗೋಳ : ಪಶ್ಚಿಮ ಪದವೀಧರರ ಚುನಾವಣಾ ಪ್ರಚಾರ ಬಿರುಸಿನಿಂದಲೇ ಆರಂಭವಾಗಿದ್ದು ಅಭ್ಯರ್ಥಿಗಳು ತಾ ಮುಂದು ನಾ ಮುಂದು ಎಂದು ಮತದಾರರನ್ನ ತಮ್ಮೆಡೆ ಸೆಳೆಯುವ ಪ್ರಯತ್ನಾ ಮಾಡ್ತಾ ಇದ್ದರೆ ಕುಂದಗೋಳ ತಾಲೂಕಿನ ಪದವೀಧರ ಮತದಾರರ ಈ ಬಗ್ಗೆ ಹತಾಶ ಮನೋಭಾವ ತೋರಿದ್ದಾರೆ.

ಹೌದು ! ಪದವೀಧರೇ ಪ್ರಶ್ನಿಸುವ ಪೈಕಿ ಚುನಾವಣೆ ಸಂದರ್ಭ ಬರ್ತಿರಿ ವೋಟ್ ಕೇಳ್ತಿರಿ ಮನಿ ಅಡ್ರೇಸಗೆ ಬೆಂಬಲಿಸ್ರೀ ಅಂತ ಪತ್ರ ಕಳುಹಿಸುತ್ತಿರಾ ? ಯಾವುದಾದ್ರೂ ಉದ್ಯೋಗ ಮಾಹಿತಿ ಪತ್ರ ಕಳುಹಿಸಿದ್ದೀರಾ ? ವಿದ್ಯಾವಂತ ಪದವೀಧರರಿಗೆ ಉದ್ಯೋಗ ನೀಡಿದ್ದಿರಾ ? ಇದರಿಂದ ವಿದ್ಯಾವಂತರಿಗೆ ಏನಿದೆ ಲಾಭ ಎನ್ನುತ್ತಿದ್ದಾರೆ.

ಇನ್ನು ಅದೆಷ್ಟೋ ಪದವೀಧರ ಡಿಗ್ರೀ ಓದಿ ಡಿಸ್ಟಿಂಕ್ಷನ್ ಪಾಸಾದ್ರೂ ಕೆಲ್ಸಾ ಇಲ್ಲದೆ ನಿರುದ್ಯೋಗ ತುತ್ತಾಗಿದ್ದೇವೆ ನಮಗೇನು ? ಲಾಭ ಐದು ವರ್ಷಕ್ಕೊಮ್ಮೆ ಮನೆ ಬಾಗಿಲಿಗೆ ಬರೋರು ಏನ್ಮಾಡ್ತಾರೆ ಎಂದ್ರೇ ಕೆಲ ಪದವೀಧರರು ತಾವು ಪದವಿ ಓದಿ ಮೂರು ವರ್ಷ ಕಳದ್ರೂ ಅರ್ಜಿ ಸಲ್ಲಿಸಿಲ್ಲ ಕುಂದಗೋಳ ತಾಲೂಕಿನಲ್ಲೇ 1084 ಪುರುಷ ಮಹಿಳೆ 384 ಮತದಾರರು ಹೊಸದಾಗಿ ನೋಂದಣಿಯಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಪದವೀಧರು ನೋಂದಣಿಯಿಂದ ಹಿಂದೆ ಉಳಿದಿದ್ದಾರೆ.

ಇನ್ನೂ ಅದೆಷ್ಟೋ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ಶಿಕ್ಷಕಿಯರಿಗೆ ವೇತನದ ಸಮಸ್ಯೆ ಜೊತೆ ಕೊರೊನಾದಿಂದ ಶಾಲೆ ಮುಚ್ಚಿದ ಕಾರಣ ಜೀವನ ನಿರ್ವಹಣೆ ಕಷ್ಟವಾಗಿ ಅನಿವಾರ್ಯವಾಗಿ ಬೇರೆ ಉದ್ಯೋಗಕ್ಕೆ ಅಣಿಯಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

22/10/2020 11:46 am

Cinque Terre

39.16 K

Cinque Terre

12

ಸಂಬಂಧಿತ ಸುದ್ದಿ