ಕಲಘಟಗಿ:ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ಸಂಘಟನೆಯ ಪದಾಧಿಕಾರಿಗಳು ಶಾಸಕ ಸಿ ಎಂ ನಿಂಬಣ್ಣವರ ಕಚೇರಿಯ ಎದುರು ಪ್ರತಿಭಟನೆ ಮಾಡಿದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕಾಯ್ದೆ ರೈತರಿಗೆ ಮರಣ ಶಾಸನವಾಗಿದೆ ಎಂದು ಜಿಲ್ಲಾ ಅಧ್ಯಕ್ಷ ವಿವೇಕ ಮೋರೆ ಖಂಡಿಸಿದರು.ನಂತರ ಶಾಸಕ ಸಿ ಎಂ ನಿಂಬಣ್ಣವರ ಮನವಿ ಸ್ವೀಕರಿಸಿದರು.
ಗುರುನಾಥ ಬೀರನವರ,ಮಂಜು ಗೌರಿ,ನಾಗಪ್ಪ ಬೆಳ್ಳಿಗಟ್ಟಿ ಶಂಕರಗೌಡ ಪಾಟೀಲ ಹಾಗೂ ರೈತರು ಉಪಸ್ಥಿತರಿದ್ದರು.
Kshetra Samachara
20/10/2020 09:27 pm