ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಚೆಂಬೆಳಕಿನ ಕವಿ ನಿವಾಸಕ್ಕೆ ಭೇಟಿ ನೀಡಿದ ಗುರಿಕಾರ: ಮತಯಾಚನೆ

ಧಾರವಾಡ: ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಸವರಾಜ ಗುರಿಕಾರ ಅವರು ಧಾರವಾಡದ ಕಲ್ಯಾಣನಗರದಲ್ಲಿರುವ ಡಾ.ಚೆನ್ನವೀರ ಕಣವಿ ಅವರ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಚುನಾವಣೆ ಸಮೀಪಿಸುತ್ತಿದ್ದು, ಇದರ ಹಿನ್ನೆಲೆಯಲ್ಲಿ ಗುರಿಕಾರ ಅವರ ಮಿಂಚಿನ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಡಾ.ಚೆನ್ನವೀರ ಕಣವಿ ಅವರ ಮನೆಗೆ ಭೇಟಿ ನೀಡಿ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿದರು.

ಕಣವಿ ಅವರೂ ಗುರಿಕಾರ ಅವರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಎಂದು ಆಶೀರ್ವಾದ ಮಾಡಿದರು.

ರಾಘು ನರಗುಂದ, ಶಿವಾನಂದ ಇತರರು ಈ ಸಂದರ್ಭದಲ್ಲಿದ್ದರು.

ಇದಕ್ಕೂ ಮುನ್ನ ಕಲಘಟಗಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪದವೀಧರರನ್ನುದ್ದೇಶಿಸಿ ಮಾತನಾಡಿದ ಬಸವರಾಜ ಗುರಿಕಾರ, ಇಷ್ಟು ವರ್ಷಗಳ ಕಾಲ ಯಾವ ಸರ್ಕಾರವೂ ಪದವೀಧರರ ಸಮಸ್ಯೆಗಳತ್ತ ಬೆಳಕು ಚೆಲ್ಲಿಲ್ಲ. ಆದ್ದರಿಂದ ಈ ಬಾರಿ ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಗೆದ್ದು ಬಂದಿದ್ದೇ ಆದಲ್ಲಿ ಪದವೀಧರರ ಎಲ್ಲ ರೀತಿಯ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

ನಂತರ ಕಲಘಟಗಿಯ ಗುಡ್ ನ್ಯೂಸ್ ಕಾಲೇಜು, ಸರ್ಕಾರಿ ಪದವಿ ಕಾಲೇಜು ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಸವರಾಜ ಗುರಿಕಾರ ಪ್ರಚಾರ ನಡೆಸಿದರು. ಅಲ್ಲದೇ, ಅಂಬೇಡ್ಕರ ಭವನದಲ್ಲಿ ಪದವೀಧರರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು.

ಈ ಸಂಧರ್ಭದಲ್ಲಿ ವಿನಾಯಕ ಗುಡ್ಡದಕೇರಿ, ಯಲ್ಲಪ್ಪ ಮೇಲಿನಮನಿ, ಮಂಜುನಾಥ  ಮಾದರ , ಶಶಿಧರ ಕಟ್ಟಿಮನಿ, ಅಣ್ಣಪ್ಪ ಕಟ್ಟಿಮನಿ ಇದ್ದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲೂ ಗುರಿಕಾರ ಪರವಾಗಿ ಪ್ರಚಾರ ನಡೆಸಲಾಯಿತು. ಇನ್ನು, ಜೋಯಿಡಾ, ಶಿರಸಿ, ಸಿದ್ದಾಪೂರ, ಅಂಕೋಲಾ, ಹಾಗೂ ಕಾರವಾರ, ಹಾವೇರಿ, ಶಿಗ್ಗಾವಿ, ಧಾರವಾಡದಲ್ಲಿ ಗುರಿಕಾರ ರವರ ಪರವಾಗಿ ಪದವೀಧರರ ತಂಡವು ಪ್ರಚಾರ ನಡೆಸಿತು.

Edited By :
Kshetra Samachara

Kshetra Samachara

20/10/2020 07:46 pm

Cinque Terre

20.7 K

Cinque Terre

0

ಸಂಬಂಧಿತ ಸುದ್ದಿ