ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಹಾರೂಗೇರಿ ಗ್ರಾಮದಲ್ಲಿ ರೈತ ಸಂಘದಿಂದ ಸೂಚನಾ ಫಲಕ ಅನಾವರಣ

ಕಲಘಟಗಿ: ತಾಲ್ಲೂಕಿನ ಹಾರೂಗೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ(ಲಕ್ಷ್ಮೀನಾರಾಯಣಗೌಡ ಬಣ)ದ ನಾಮಫಲಕವನ್ನು ಅನಾವರಣ ಗೊಳಿಸಲಾಯಿತು.

ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ನಾಮ ಫಲಕವನ್ನು ಎತ್ತಿನ ಚಕ್ಕಡಿಯಲ್ಲಿ ಇಟ್ಟು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಕೈಗೊಂಡು ನಂತರ ರೈತ ಸಂಘದ ಸೂಚನಾ ಫಲಕವನ್ನು ಅನಾವರಣ ಗೊಳಿಸಲಾಯಿತು.

"ನಾಮಫಲಕದಲ್ಲಿ ರೈತರು ಮಾಡಿದ ಬೆಳೆ ಸಾಲ ಮುಂದಿಟ್ಟುಕೊಂಡು ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಭ್ರಷ್ಟ ರಾಜಕಾರಣಿಗಳು ಗ್ರಾಮದ ಒಳಗೆ ಪ್ರವೇಶ ಮಾಡುವಂತಿಲ್ಲ.ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಮಾತ್ರ ಅವಕಾಶವಿದ್ದು, ಸೋಮವಾರ ರೈತರ ರಜಾ ದಿನವಿರುತ್ತದೆ ಎಂದು ಸೂಚನೆಯನ್ನು ನಾಮಫಲದಲ್ಲಿ ಹಾಕಲಾಯಿತು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಂಕ್ರಪ್ಪ ಮಡಿವಾಳರ,ಜಿಲ್ಲಾಧ್ಯಕ್ಷ ಸುಭಾಸ ಸುಣಗಾರ,ಎಂ.ಎಲ್ ಬಾಂಬಲೆ,ಚೆನ್ನಪ್ಪ ದೊಡ್ಡಮನಿ,ಯಲ್ಲಪ್ಪ ರಾಮನಾಳ,ಮಂಜುನಾಥ ಬಮ್ಮಿಗಟ್ಟಿ,ಗದಿಗೆಪ್ಪ ಮೊರಬದ,ಮಹಾದೇವಿ ಪಾಟೀಲ ಹಾಗೂ ರೈತರು ಇದ್ದರು.

Edited By : Manjunath H D
Kshetra Samachara

Kshetra Samachara

19/10/2020 11:13 am

Cinque Terre

24.82 K

Cinque Terre

0

ಸಂಬಂಧಿತ ಸುದ್ದಿ