ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗದಲ್ಲಿ ಪ್ರಚಾರ ನಡೆಸಿದ ಗುರಿಕಾರ

ಧಾರವಾಡ: ಕರ್ನಾಟಕ ಪಶ್ಚಿಮ ಪದವೀಧರರ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಗುರಿಕಾರ ಅವರು ಭಾನುವಾರ ಗದಗ ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಗದಗ ಜಿಲ್ಲೆಯ ಗಜೇಂದ್ರಗಡ, ರೋಣ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಗುರಿಕಾರ ಅವರು ಪದವೀಧರರನ್ನು ಭೇಟಿಯಾಗಿ ಪ್ರಚಾರ ಮಾಡಿದರು.

ಗದಗನ ಜೆ.ಟಿ.ಕಾಲೇಜು, ಪುಟ್ಟರಾಜ ಗವಾಯಿಗಳ ಮಹಾವಿದ್ಯಾಲಯ, ಸಂಗೀತ ಕಾಲೇಜು, ಸರ್ಕಾರಿ ಪದವಿ ಕಾಲೇಜು, ಅಬ್ದಲ್ ಕಲಾಂ ಕಾಲೇಜು, ಉರ್ದು ಆಂಗ್ಲ ಮಾಧ್ಯಮ ಶಾಲೆ, ಎಲ್.ಐ.ಸಿ, ಕೆ.ಇ.ಬಿ ಹಾಗೂ ಗದಗ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಪ್ರೇಮನಾಥ ಗರಗ, ಎ.ಕೆ ಮುಧೋಳ, ಪುನೇದ ಉಮಚಗಿ, ಶಿವು ಹೊಸಳ್ಳಿಮಠ, ದಜರತಸಾಬ್ ಮೆಣಸಗಿ, ಡಿ.ಬಿ.ಕಂಬಳಿ, ಶಿವಾನಂದ ಇತರರು ಇದ್ದರು.

ಇನ್ನು ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರವಿಕುಮಾರ ಜಮಖಂಡಿ, ನಾಗರಾಜ ಉಣಕಲ್, ರಾಘು ನರಗುಂದ ಅವರ ತಂಡ ಪ್ರಚಾರ ಮಾಡಿದರೆ, ಗುರಿಕಾರ ಪರವಾಗಿ ರಮೇಶ ಕುಂಬಾರ ಹಾಗೂ ಸುರೇಶ್ ಕುಂಬಾರ ಅವರು ಉಮಾಚಗಿ, ಮಲ್ಲಿಗವಾಡ ಹಾಗೂ ಕೋಳಿವಾಡ ಗ್ರಾಮಗಳಲ್ಲಿ ಪ್ರಚಾರ ಮಾಡಿದರು.

ವಿನಾಯಕ ಗುಡ್ಡದಕೇರಿ, ಗಣೇಶ ಜಿರಗೋಡ, ಸೋಮೇಶ್ ಹಂಚಿನಮನಿ, ಯಲ್ಲಪ್ಪ ಜೀರಗೋಡ, ಕಲ್ಮೇಶ ಮುಗದ, ಫಕ್ಕೀರ ಮುಗದ, ಆಕಾಶ ಜಿರಗೋಡ, ಪ್ರಕಾಶ ಮುಗದ, ಮಂಜು ಹಂಚಿನಮನಿ ಅವರ ತಂಡ ಕಲಘಟಗಿ ತಾಲೂಕಿನ ಕುರುವಿನಕೊಪ್ಪ, ಉಗ್ಗಿನಕೇರಿ, ಮಿಶ್ರಿಕೋಟೆ, ಹಿರೇಹೊನ್ನಳ್ಳಿ, ಬೇಗೂರು, ಹುಲಗಿನಕಟ್ಟಿ, ಸಂಗದೇವರಕೊಪ್ಪ, ಸೂರಶೆಟ್ಟಿಕೊಪ್ಪ, ಗಂಜಿಗಟ್ಟಿ, ಬೋಗೆನಾಗರಕೊಪ್ಪ, ನಾಗನೂರ, ಪರಸಾಪುರ, ಸೋಲಾರಕೊಪ್ಪ, ಜಿ.ಬಸವನಕೊಪ್ಪ, ಹುಣಸಿಕಟ್ಟಿ, ಬಿರವಳ್ಳಿ , ತಬಕದಹೊನ್ನಳ್ಳಿ, ಗಂಬ್ಯಾಪೂರ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಮಾಡಿದರು.

ಹುಬ್ಬಳ್ಳಿಯಲ್ಲಿ ಶಂಕರ ಉಪ್ಪಿನ, ರಾಧಿಕಾ ಕೆಂಗಾರ, ರಾಘು ಕಠಾರೆ ಇವರ ತಂಡವು ಪ್ರಚಾರ ಮಾಡಿತು. ಧಾರವಾಡದ ಹೆಬ್ಬಳ್ಳಿಯಲ್ಲಿ ಆನಂದ ಹಾರಿಕೊಪ್ಪ ಅವರ ತಂಡವು ಪ್ರಚಾರ ಕಾರ್ಯ ಮಾಡಿತು‌

ನರಗುಂದ ತಾಲೂಕಿನ ಕಲಕೇರಿ, ಹುಣಸಿನಕಟ್ಟಿ, ಜಗತಾಪೂರ, ಸಿದ್ದಾಪೂರ, ಕನಕಿನಕೊಪ್ಪ, ಗುರಲಕಟ್ಟಿ ಗ್ರಾಮಗಳಲ್ಲಿ ಗುರಿಕಾರ ಪರವಾಗಿ ಬಿರುಸಿನ ಪ್ರಚಾರ ನಡೆಯಿತು.

ಜೋಯಿಡಾ, ಶಿರಸಿ, ಸಿದ್ದಾಪೂರ, ಅಂಕೋಲಾ, ಹಾಗೂ ಕಾರವಾರ ನಗರದಲ್ಲಿ ಗುರಿಕಾರ ಪರವಾಗಿ ಪದವೀಧರರ ತಂಡವು ಪ್ರಚಾರ ಕಾರ್ಯ ಮಾಡಿತು.

Edited By : Nagesh Gaonkar
Kshetra Samachara

Kshetra Samachara

18/10/2020 07:00 pm

Cinque Terre

30.81 K

Cinque Terre

0

ಸಂಬಂಧಿತ ಸುದ್ದಿ