ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇದ್ದಕ್ಕಿದ್ದಂತೆ ಬ್ಲಾಸ್ಟ್ ಆದ ಪೈಪಲೈನ್: ಎಲ್ಲಿ ಗೊತ್ತಾ?

ಧಾರವಾಡ: ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿರುವ ಮಲಪ್ರಭಾ ನೀರು ಶುದ್ಧೀಕರಣ ಘಟಕದಿಂದ ಧಾರವಾಡಕ್ಕೆ ಬರುವ ಮುಖ್ಯ ಪೈಪ್ ಲೈನ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆದ ಘಟನೆ ಧಾರವಾಡದ ಸವದತ್ತಿ ರಸ್ತೆಯಲ್ಲಿರುವ ಎಪಿಎಂಸಿ ಮುಖ್ಯ ಗೇಟ್ ಬಳಿ ನಡೆದಿದೆ.

ಅಮ್ಮಿನಭಾವಿ ನೀರು ಶುದ್ಧೀಕರಣ ಘಟಕದಿಂದ ಧಾರವಾಡ ನಗರಕ್ಕೆ ಮಲಪ್ರಭಾ ಕುಡಿಯುವ ನೀರು ಈ ಮುಖ್ಯ ಪೈಪ್ ಲೈನ್ ಮೂಲಕ ಪೂರೈಕೆಯಾಗುತ್ತದೆ. ಆದರೆ, ಗುರುವಾರ ಏಕಾಏಕಿ ಆ ಪೈಪ್ ಲೈನ್ ಬ್ಲಾಸ್ಟ್ ಆಗಿ ದೊಡ್ಡ ಪ್ರಮಾಣದಲ್ಲಿ ನೀರು ಹೊರಗಡೆ ಹರಿದು ಹೋಗಿದೆ. ಈ ನೀರು ಕಲುಷಿತ ನೀರಿನೊಂದಿಗೆ ಮಿಶ್ರಣವಾಗಿ ಧುಮ್ಮಿಕ್ಕಿ ಹರಿಯುತ್ತಿತ್ತು. ಇದರಿಂದ ಆ ಭಾಗದ ರಸ್ತೆಗಳು ಜಲಾವೃತಗೊಂಡಿದ್ದವು.

Edited By :
Kshetra Samachara

Kshetra Samachara

15/10/2020 08:32 pm

Cinque Terre

42.64 K

Cinque Terre

10

ಸಂಬಂಧಿತ ಸುದ್ದಿ