ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆ- ಬೆಳೆ ಹಾನಿಯಾದರು ತಿರುಗಿ ನೋಡುತ್ತಿಲ್ಲ ಜಿಲ್ಲಾಡಳಿತ- ಕೋನರೆಡ್ಡಿ ಆಕ್ರೋಶ

ಹುಬ್ಬಳ್ಳಿ: ಅತಿಯಾಗಿ ಸುರಿದ ಬಾರಿ ಮಳೆಯಿಂದ ಅತಿವೃಷ್ಟಿಯಾಗಿ ತಾಲೂಕಿನ ನವಲಗುಂದ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ನೂರಾರು ಮನೆಗಳು ಬಿದ್ದಿದ್ದು' ಅದರ ಜೊತೆಗೆ ಮುಂಗಾರು ಬೆಳೆಗಳು ಹಾನಿಯಾಗಿದ್ದರು ಸಹ ಜಿಲ್ಲಾಡಳಿತ ಪರಿಹಾರ ನೀಡುವಂತೆ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು..

ನಗರದ ತಹಶೀಲ್ದಾರ ಕಚೇರಿ ಎದುರುಗಡೆ ಪ್ರತಿಭಟನೆ ಮಾಡದ ಅವರು, ಕಳೆದ ವರ್ಷವೂ ಸಹ ಅತಿಯಾದ ಮಳೆಯಿಂದಾಗಿ ನೂರಾರು ಮನೆಗಳು ಬಿದ್ದಿವೆ, ಮತ್ತು ಮುಂಗಾರು ಬೆಳೆಗಳಾದ ಶೇಂಗಾ, ಹತ್ತಿ,ಹೆಸರು,ಹಲಸಂದಿ, ಸೇರಿದಂತೆ ಎಲ್ಲಾ ಬೆಳೆಗಳು ನಾಶವಾಗಿವೆ, ಇದರಿಂದಾಗಿ ರೈತರು ಹಾಗೂ ನವಲಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಜೀವನ ನಡೆಸುವುದು ಕಷ್ಟವಾಗಿದೆ, ಆದ್ದರಿಂದ ಕೂಡಲೇ ರಾಜ್ಯ ಸರಕಾರ ಬೆಳೆವಿಮೆ ಹಾಗೂ ಮನೆ ಕಳೆದುಕೊಂಡವರಿಗೆ ನೆರೆ ಪರಿಹಾರ ನೀಡುವಂತೆ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆದಷ್ಟು ಬೇಗ ಪರಿಹಾರ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು

Edited By :
Kshetra Samachara

Kshetra Samachara

14/10/2020 01:13 pm

Cinque Terre

27.11 K

Cinque Terre

2

ಸಂಬಂಧಿತ ಸುದ್ದಿ