ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸವರಾಜ ಗುರಿಕಾರ ಪರವಾಗಿ ವಿವಿಧೆಡೆಗಳಲ್ಲಿ ಬಿರುಸಿನ ಪ್ರಚಾರ

ಧಾರವಾಡ: ಪಶ್ಚಿಮ ಪದವೀಧರರ ವಿಧಾನ ಪರಿಷತ್ ಚುನಾವಣೆ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಸವರಾಜ ಗುರಿಕಾರ ಅವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಗುರಿಕಾರ ಅವರ ಪರವಾಗಿ ಅವರ ಬೆಂಬಲಿಗರೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಗುರಿಕಾರ ಅವರ ಪರವಾಗಿ ಅವರ ಬೆಂಬಲಿಗರು ಇಂದು ಹಾವೇರಿ, ಗದಗ, ಧಾರವಾಡ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಮತಯಾಚನೆ ಮಾಡಿದರು.

ಬಸವರಾಜ ಗುರಿಕಾರ ಅವರು ಸ್ವತಃ ಕಾರವಾರ ಜಿಲ್ಲೆ ಹಾಗೂ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ಪದವೀಧರರಿಂದ ಉತ್ತಮ ಸ್ಪಂದನೆ ದೊರೆಯಿತು. ಈರಣ್ಣ ಮುರಗೋಡ, ಮಲ್ಲಪ್ಪ ಹೊಂಗಲ ಇತರರು ಇದ್ದರು.

ಇತ್ತ ಯಲ್ಲಪ್ಪ ಜಿರಗೋಡ, ಪ್ರಕಾಶ ಮುಗದ, ಮಂಜುನಾಥ ಹಂಚಿನಮನಿ, ಕಲ್ಮೇಶ ಮುಗದ ಅವರು ಹುಲ್ಲಂಬಿ, ಹಸರಂಬಿ, ಕೂಡಲಗಿ ಕಡೆಗಳಲ್ಲಿ ಪ್ರಚಾರ ನಡೆಸಿದರು.

ಸಂಗಮೇಶ ಕುಂಬಾರ ಹಾಗೂ ಸುರೇಶ್ ಕುಂಬಾರ ಅವರು ಕುಸುಗಲ್ ಹಾಗೂ ಬ್ಯಾಹಟ್ಟಿ ಗ್ರಾಮಗಳಲ್ಲಿ ಪ್ರಚಾರ ಮಾಡಿದರು. ಗ್ರಾಮದಲ್ಲಿರುವ ಪದವೀಧರರು ಗುರಿಕಾರ ಅವರಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಗಣೇಶ ಜೀರಗೋಡ, ಸೋಮೇಶ ಹಂಚಿನಮನಿ, ಜಗದೀಶ ಜಿರಗೋಡ, ಆಕಾಶ ಜಿರಗೋಡ ಅವರು ಸೋಮಾಪುರ ಹಾಗೂ ಹಾರೋಬೆಳವಡಿ ಗ್ರಾಮಗಳಲ್ಲಿ ಪ್ರಚಾರ ಮಾಡಿದರು.

ಇನ್ನು ಆನಂದ ಹಾರಿಕೊಪ್ಪ ಅವರ ತಂಡವು ಧಾರವಾಡ ಗ್ರಾಮೀಣ ಭಾಗದಲ್ಲಿ ಪ್ರಚಾರ ಕಾರ್ಯವನ್ನು ಮಾಡಿತು. ಇವರಿಗೆ ಗ್ರಾಮೀಣ ಭಾಗದ ಪದವೀಧರರಿಂದ ಉತ್ತಮವಾದ ಪ್ರತಿಕ್ರಿಯೆ ದೊರೆಯಿತು.

ಕುಂದಗೋಳ ತಾಲೂಕಿನ ಹಂಚಿನಾಳ, ಯಲಿವಾಳ, ಇಂಗಳಗಿ, ಕುಬಿಹಾಳ, ಹೊಸ ಹಂಚಿನಾಳ ಗ್ರಾಮಗಳಲ್ಲಿ ರಾಘು ನರಗುಂದ, ನಾಗರಾಜ ಉಣಕಲ್ ಅವರ ತಂಡವು ಪ್ರಚಾರ ಕಾರ್ಯ ಮಾಡಿತು.

Edited By :
Kshetra Samachara

Kshetra Samachara

13/10/2020 09:09 pm

Cinque Terre

20.28 K

Cinque Terre

3

ಸಂಬಂಧಿತ ಸುದ್ದಿ