ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಸ್ತಿ ಪ್ರಮಾಣ ಪತ್ರಕ್ಕೆ ಹೊಸ ತಂತ್ರಜ್ಞಾನ: ಜಿಲ್ಲೆಯ 160 ಗ್ರಾಮಗಳಿಗೆ ಸರ್ಕಾರದ ಸ್ವಾಮಿತ್ವ ಯೋಜನೆ

ಹುಬ್ಬಳ್ಳಿ: ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದ ಆಸ್ತಿ ಪ್ರಮಾಣ ಪತ್ರ ವಿತರಣೆ ಮಾಡುವ ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆ ಧಾರವಾಡ ಜಿಲ್ಲೆಯಲ್ಲಿಯೂ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಧಾರವಾಡ ಜಿಲ್ಲೆಯ 67 ಗ್ರಾಮ ಪಂಚಾಯತಿಗಳ 160 ಗ್ರಾಮಗಳನ್ನು ಗುರುತಿಸಿ 94,419 ಆಸ್ತಿಗಳನ್ನು ಡ್ರೋಣ್ ಮೂಲಕ ಸರ್ವೆ ಮಾಡುವ ಗುರಿ ಹೊಂದಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಪೂರಕವಾದ ಯೋಜನೆಯಾಗಿದೆ. ಈ ಯೋಜನೆಯು ಗ್ರಾಮೀಣ ಪ್ರದೇಶದ ಆಸ್ತಿಗಳನ್ನು ತಂತ್ರಜ್ಞಾನದಿಂದ ಭೂಮಾಪನ ಮಾಡಿಸಿ ಮಾಲೀಕರಿಗೆ ಆಸ್ತಿ ಪ್ರಮಾಣ ಪತ್ರ ವಿತರಿಸಲಾಗುತ್ತದೆ. ಇದರಿಂದ ಗ್ರಾಮೀಣ ಜನರ ಆಸ್ತಿಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿವೆ. ಕಂದಾಯ ಇಲಾಖೆಯು ಹಳ್ಳಿಗಳಲ್ಲಿ ದಾಖಲೆ ಸಂಗ್ರಹಿಸಲು ಆರಂಭಿಸಿದೆ. ಇದರ ಜೊತೆಗೆ ವ್ಯಾಜ್ಯದಲ್ಲಿ ಇರುವ ಆಸ್ತಿಯ ಸಮಸ್ಯೆಗಳನ್ನು ಕಡಿಮೆ ಅವಧಿಯಲ್ಲಿ ಬಗೆಹರಿಸಲಾಗುತ್ತದೆ ಎಂದು ಹೇಳಿದರು.

‘ನಿಖರವಾದ ಭೂ ದಾಖಲಾತಿ ರಚಿಸುವುದು, ಆಸ್ತಿ-ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಆಸ್ತಿಗಳ ಬಗ್ಗೆ ಸರಿಯಾದ ದಾಖಲೆಗಳಿದ್ದರೆ, ಯಾವುದೇ ಬ್ಯಾಂಕ್ ಅವರಿಗೆ ಸಾಲವನ್ನು ನಿರಾಕರಿಸುವಂತಿಲ್ಲ. ಈ ಯೋಜನೆ ಗ್ರಾಮಸ್ಥರಿಗೆ ಸಾಲ ತೆಗೆದುಕೊಳ್ಳುವಲ್ಲಿ ನೆರವಾಗುತ್ತದೆ' ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.

Edited By : Vijay Kumar
Kshetra Samachara

Kshetra Samachara

13/10/2020 02:00 pm

Cinque Terre

8.47 K

Cinque Terre

0

ಸಂಬಂಧಿತ ಸುದ್ದಿ