ಧಾರವಾಡ: ಪಶ್ಚಿಮ ಪದವೀಧರರ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಸವರಾಜ ಗುರಿಕಾರ ಅವರು ಇಂದು ವಿವಿಧ ಕಡೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಕಲಘಟಗಿ, ಶಿಗ್ಗಾಂವಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ಹಾವೇರಿ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ ಗುರಿಕಾರ, ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಪದವೀಧರರಲ್ಲಿ ಮನವಿ ಮಾಡಿದರು.
ಸುರೇಶ, ವಿನಾಯಕ ಗುಡ್ಡದಕೇರಿ, ನಾಗರಾಜ ಉಣಕಲ್, ತಿಮ್ಮಣ್ಣ ಬಂಡಿವಡ್ಡರ ಹಾಗೂ ಆಯಾ ಗ್ರಾಮಗಳ ಹಿರಿಯರು ಇದ್ದರು.
ಇನ್ನು ಬಸವರಾಜ ಗುರಿಕಾರ ಅವರ ಪರವಾಗಿ ಹಾವೇರಿ, ಗದಗ, ಧಾರವಾಡ, ಕಾರವಾರ ಜಿಲ್ಲೆಗಳ ಬಿ.ಗುಡಿಹಾಳ, ಕಾರವಿನಕೊಪ್ಪ, ಅರಳಿಹೊಂಡ, ತಾವರಗೇರಿ, ಆಸ್ತಿಕಟ್ಟಿ, ಬಿರವಳ್ಳಿ, ಗರಡಿಹೊನ್ನಳ್ಳಿ, ಅಲ್ಲಹರವಿ ತಾಂಡಾ, ತಬಕದಹೊನ್ನಳ್ಳಿ ಗ್ರಾಮಗಳಲ್ಲಿ ಅವರ ಬೆಂಬಲಿಗರಾದ ಗಣೇಶ, ಸೋಮೇಶ, ಯಲ್ಲಪ್ಪ, ಕಲ್ಮೇಶ, ಜಗದೀಶ್, ಆಕಾಶ, ಮಂಜುನಾಥ ಹಾಗೂ ಪ್ರಕಾಶ ಅವರು ಪ್ರಚಾರ ಮಾಡಿದರು.
ಕಾರವಾರ ಜಿಲ್ಲೆಯಲ್ಲಿ ರವಿಕುಮಾರ ಜಮಖಂಡಿ ಇವರ ನೇತೃತ್ವಲ್ಲಿ ಹಳಿಯಾಳ, ದಾಂಡೇಲಿ, ಯಲ್ಲಾಪುರ, ತಾಲೂಕಿನಲ್ಲಿ ಗುರಿಕಾರ ಪರವಾಗಿ ಪ್ರಚಾರ ಮಾಡಲಾಯಿತು.
Kshetra Samachara
10/10/2020 07:26 pm