ಹುಬ್ಬಳ್ಳಿ: ರಾಷ್ಟ್ರೀಯ ಅಂಚೆ ದಿನದ ಅಂಗವಾಗಿ ಹುಬ್ಬಳ್ಳಿ ಮುಖ್ಯ ಅಂಚೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸಿತ್ತಿರುವ ಎಲ್ಲ ಅಂಚೆ ಪೇದೆ ಸೇನಾನಿಗಳಿಗೆ ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಸಾಬೂನು, ಮಾಸ್ಕ್, ಹಾಗೂ ಸಸಿ ಕೊಟ್ಟು ಗೌರವಿಸಿ ಸನ್ಮಾನಿಸಲಾಯಿತು.
ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡoಗನವರ ಮಾತನಾಡಿ ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ ಮತ್ತು ಇದರ 1,55,000 ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಮಗೆ ಅಂಚೆ ಕಛೇರಿ ಕಾಣಸಿಗುತ್ತದೆ. ಇದರಿಂದಾಗಿಯೇ ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡoಗನವರ, ಡೆಪ್ಯುಟಿ ಪೋಸ್ಟ್ ಮಾಸ್ಟರ್ ಎಸ್.ಎಸ್.ಸೊರಟುರ, ಅಸಿಸ್ಟಂಟ್ ಪೋಸ್ಟ್ ಮಾಸ್ಟರ್ ಆರ್.ವಿ.ಕುಲಕರ್ಣಿ, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ವಿ.ಸಿ.ದೊಡ್ಡಮನಿ, ಪ್ರವೀಣ ಹಟ್ಟಿಹೊಳಿ, ಪ್ರವೀಣ ಪಾಟೀಲ, ಚಂದ್ರಶೇಖರ್ ಏರಿಮನಿ, ರಾಜು ರಾಜೊಳೀ, ವೃಷಭ ಡoಗನವರ ಮೊದಲಾದವರು ಉಪಸ್ತಿತರಿದ್ದರು.
Kshetra Samachara
09/10/2020 07:11 pm