ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಪ ಚುನಾವಣೆ: 19 ಅಭ್ಯರ್ಥಿಗಳಿಂದ 32 ನಾಮಪತ್ರ ಸಲ್ಲಿಕೆ

ಧಾರವಾಡ: ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅಕ್ಟೋಬರ್ 28 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ 13 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಒಟ್ಟು 19 ಅಭ್ಯರ್ಥಿಗಳಿಂದ 32 ನಾಮಪತ್ರಗಳು ಸಲ್ಲಿಕೆಯಾಗಿವೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ಎಂ.ಕುಬೇರಪ್ಪ, ಭಾರತೀಯ ಜನತಾ ಪಕ್ಷದ ಎಸ್.ವಿ.ಸಂಕನೂರ, ಜೆಡಿಎಸ್ ನಿಂದ ಶಿವಶಂಕರ ಕಲ್ಲೂರ ಇಂದು ಮತ್ತೊಂದು ಪ್ರತಿಗಳಲ್ಲಿ ನಾಮಪತ್ರಗಳನ್ನು ಸಲ್ಲಿಸಿದರು.

ಶಿವಸೇನೆ ಅಭ್ಯರ್ಥಿಯಾಗಿ ಸೋಮಶೇಖರಪ್ಪ ಉಮರಾಣಿ, ಸ್ವತಂತ್ರ ಅಭ್ಯರ್ಥಿಗಳಾಗಿ ಮಹ್ಮದ್ ಶಫೀವುದ್ದೀನ್, ಬಿ.ಡಿ.ಹಿರೇಗೌಡರ, ದಶರಥರಾಜ ರಂಗಾರೆಡ್ಡಿ, ಶಿವರಾಜ ಕಾಂಬಳೆ, ಮಲ್ಲಿಕಾರ್ಜುನ ಚನ್ನಪ್ಪ, ಮಂಜುನಾಥ ಬೆಳವಟ್ಟಿ, ಕೃಷ್ಣ ಹನುಮಂತಪ್ಪ, ಅಶೋಕ ಜವಳಿ ಹಾಗೂ ಬೊಮ್ಮನಪಾಡ ಅವರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

08/10/2020 11:17 pm

Cinque Terre

10.56 K

Cinque Terre

0

ಸಂಬಂಧಿತ ಸುದ್ದಿ