ಹುಬ್ಬಳ್ಳಿ : ನೇರ ನೇಮಕಾತಿ,ನೇರ ವೇತನ ಪಾವತಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾ ಎಸ್.ಸಿ ಎಸ್.ಟಿ ಪೌರಕಾರ್ಮಿಕರ-ನೌಕರರ ಸಂಘಟನೆಯ ವತಿಯಿಂದ ಬೂಟ್ ಪಾಲಿಶ್ ಮಾಡುವ ಮೂಲಕ ಮಹಾನಗರ ಪಾಲಿಕೆ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸುಮಾರು ವರ್ಷಗಳಿಂದ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು ಕೂಡ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸರ್ಕಾರ ಯಾವುದೇ ಸೂಕ್ತ ಕ್ರಮಗಳನ್ನು ಜಾರಿಗೊಳಿಸುತ್ತಿಲ್ಲ ಅಲ್ಲದೇ ಪೌರಕಾರ್ಮಿಕರ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದು,ಕೂಡಲೇ ಧಾರವಾಡ ಜಿಲ್ಲಾ ಎಸ್.ಸಿ ಎಸ್.ಟಿ ಪೌರಕಾರ್ಮಿಕರ-ನೌಕರರ ಬೇಡಿಕೆ ಈಡೇರಿಸಬೇಕು ಎಂದು ಘೋಷಣೆ ಕೂಗಿ ಬೂಟ್ ಪಾಲಿಶ್ ಮಾಡಿ ಸರ್ಕಾರದ ವಿರುದ್ಧ ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗಿದರು.
Kshetra Samachara
08/10/2020 06:29 pm