ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಸೀಗೆ ಹುಣ್ಣಿಮೆ ಸಂಭ್ರಮ

ಅಣ್ಣಿಗೇರಿ: ಒಂದು ಕಾಳು ಬಿತ್ತಿ ಸಾವಿರ, ಸಹಸ್ರ ಕಾಳು ನೀಡುವ ತಾಯಿಯೆಂದರೆ ಅದು ಭೂಮಿ ತಾಯಿ.ಈ ಭೂಮಿ ತಾಯಿ ರೈತಾಪಿ ವರ್ಗದ ಜೀವಾಳ ಆಕೆಯನ್ನೂ ಪೂಜಿಸುವ ಮತ್ತು ಆರಾಧಿಸುವ ಹಬ್ಬವೇ ಸೀಗಿ ಹುಣ್ಣಿಮೆ.

ಕರ್ನಾಟಕದಲ್ಲಿ ಈ ಹುಣ್ಣಿಮೆಯ ಆಚರಣೆ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ರೈತರಿಗಿದು ಹಬ್ಬವೇ ಸರಿ. ಎಲ್ಲವನ್ನೂ ಕರುಣಿಸುವ ಭೂಮಿತಾಯಿಗೆ ಸೀಗೆ ಹುಣ್ಣಿಮೆ ದಿನದಂದು ಚರಗ ಚೆಲ್ಲುವ ಮೂಲಕ ಆಕೆಯನ್ನು ಸಂತುಷ್ಟಪಡಿಸುವ ದಿನ ಎಂದು ಕರೆಯಲಾಗುತ್ತದೆ. ಮತ್ತೊಂದು ಕಡೆ ಇದು ಭೂಮಿ ತಾಯಿಗೆ ಸೀಮಂತದ ಕ್ಷಣವೂ ಎಂದೂ ಹೇಳಲಾಗುತ್ತದೆ.

ಒಟ್ಟಾರೆಯಾಗಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಿ ಭೂತಾಯಿಯನ್ನು ಪೂಜಿಸಿ ಚರಗ ಚೆಲ್ಲಿ ಮನೆ ಮಂದಿಯಲ್ಲಾ ಕುಳಿತುಕೊಂಡು ಊಟ ಸವಿಯುತ್ತಾರೆ.

Edited By : PublicNext Desk
Kshetra Samachara

Kshetra Samachara

09/10/2022 08:58 pm

Cinque Terre

19.2 K

Cinque Terre

0

ಸಂಬಂಧಿತ ಸುದ್ದಿ