ಅಣ್ಣಿಗೇರಿ: 115 ನೇಯ ಭಗತ್ ಸಿಂಗ್ ಜಯಂತಿಯ ಕಾರ್ಯಕ್ರಮವನ್ನು ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮುಖಾಂತರ ಉದ್ಘಾಟಿಸಿದರು. ಈ ವೇಳೆ ಪಟ್ಟಣದ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾದರು.
01-10 2022ರ ಸಾಯಂಕಾಲ 4 ಗಂಟೆಗೆ ಭಗತ್ ಸಿಂಗ್ ಅವರ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆಯನ್ನು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಜೈ ಭಗತ್ ಸಿಂಗ್ ಯುವ ಸೇನೆ ತಿಳಿಸಿರುತ್ತದೆ.
ಇದೇ ವೇಳೆ ಜೈ ಭಗತ್ ಸಿಂಗ್ ಯುವ ಸೇನೆ ಅಣ್ಣಿಗೇರಿ ವತಿಯಿಂದ ಚನ್ನಮ್ಮ ವೃತ್ತದಲ್ಲಿ ಇಂದು ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
Kshetra Samachara
28/09/2022 05:33 pm