ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸೆಂಟ್ರಲ್ ಕ್ಷೇತ್ರದ ಟಿಕೆಟ್ ನೀಡುವಂತೆ ಜೆಡಿಎಸ್ ಮುಖಂಡರಿಗೆ ಮನವಿ

ಹುಬ್ಬಳ್ಳಿ: ನಗರದಲ್ಲಿ ಇಂದು ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಜನತಾದಳ ಜ್ಯಾತ್ಯತೀತ ಪಕ್ಷದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ,ಸಿದ್ದಲಿಂಗೇಶ್ವರಗೌಡ ಮಹಾಂತಒಡೆಯರ ಗೆಳೆಯರ ಬಳಗದ ಪೂರ್ವಭಾವಿ ಸಭೆಯಲ್ಲಿ ಸಸಿಗೆ ನೀರು ಉಣಿಸುವ ಮುಖಾಂತರ ಉದ್ಘಾಟನೆ ಮಾಡಲಾಯಿತು.

ಈ ಸಭೆಯಲ್ಲಿ ಸೆಂಟ್ರಲ್ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಸಿದ್ದಲಿಂಗೇಶ್ವರಗೌಡ ಮಹಾಂತಒಡೆಯರ ಅವರನ್ನು ಮಾಡಬೇಕು ಎಂದು, ಮಹಾನಗರ ಜಿಲ್ಲಾ ಅದ್ಯಕ್ಷರಾದ ಗುರುರಾಜ ಹುಣಸಿಮರದ ಅವರಿಗೆ ಮನವಿಯನ್ನು ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅವರು, ನಾವು ಜಿಲ್ಲಾ ಸಮಿತಿ ವತಿಯಿಂದ ಶಿಫಾರಸ್ಸು ಮಾಡಿ ಪಕ್ಷದ ವರಿಷ್ಠರಿಗೆ ಕಳುಹಿಸಿ ಕೊಡುತ್ತೇವೆ. ಈ ಭಾರಿ ಯುವಕರು ನಮ್ಮ ಪಕ್ಷದತ್ತ ಮುಖಮಾಡಿದ್ದಾರೆ. ರಾಜ್ಯ ಸರ್ಕಾರದ ಸಚಿವರು ದಿನನಿತ್ಯ ಒಂದಲ್ಲಾ ಒಂದು ಹಗರಣಗಳು ಬಯಲಿಗೆ ಬರ್ತಾ ಇದೆ. ಸರ್ಕಾರದ ಬ್ರಷ್ಟಾಚಾರ ಮಿತಿ ಮೀರಿದೆ, ಈಗಲಾದರೂ ಯುವ ಸಮುದಾಯ ಎಚ್ಚೆತ್ತುಕೊಂಡು ಸರಿಯಾದ ರೀತಿಯಲ್ಲಿ ದೇಶ ಮತ್ತು ರಾಜ್ಯವನ್ನು ಜವಾಬ್ದಾರಿ ಮುನ್ನಡೆಸಬೇಕು.

ಈ ಭಾರೀ ಜನತಾದಳ ಜ್ಯಾತ್ಯತೀತ ಪಕ್ಷಕ್ಕೆ ಬೆಂಬಲಿಸಿ, 2023ಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಈ ರಾಜ್ಯದ ಮುಖ್ಯಮಂತ್ರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಭೆಯಲ್ಲಿ ಯುವ ಸಮುದಾಯಕ್ಕೆ ಮನವಿ ಮಾಡಿದರು.

ಈ ವೇಳೆ ಪಕ್ಷದ, ಗ್ರಾಮಾಂತರ ಜಿಲ್ಲೆಯ ಅದ್ಯಕ್ಷರಾದ ಶ್ರೀ ಬಿ. ಬಿ. ಗಂಗಾಧರಮಠ, ಅಲ್ಪಸಂಖ್ಯಾತ ಆಯೋಗದ ಮಾಜಿ ಅದ್ಯಕ್ಷರಾದ ಡಾ. ಅಬ್ದುಲ್ ಕರೀಂ, ಜೆಡಿಎಸ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ, ಮಹಾನಗರ ಜಿಲ್ಲಾ ಉಪಾಧ್ಯಕ್ಷರಾದ ತುಳಸಿಕಾಂತ ಖೋಡೆ, ಕುಂದಗೋಳ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಮತ್ತು ಗ್ರಾಮಾಂತರ ಜಿಲ್ಲೆಯ ಅಲ್ಪಸಂಖ್ಯಾತ ವಿಭಾಗದ ಅದ್ಯಕ್ಷರಾದ ಹಜರತ್ ಅಲಿ ಜೋಡಮನಿ, ಮುಂತಾದವರು ಹಾಗೂ ಗೆಳೆಯರ ಬಳಗದ ನೂರಾರು ಯುವ ಮಿತ್ರರು ಮತ್ತು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/09/2022 09:29 pm

Cinque Terre

6.68 K

Cinque Terre

0

ಸಂಬಂಧಿತ ಸುದ್ದಿ