ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಶರಣ ಹೂಗಾರ ಮಾದಯ್ಯ ಜಯಂತಿ

ಅಣ್ಣಿಗೇರಿ: ಪಟ್ಟಣದ ಆದಿಕವಿ ಪಂಪಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಅಣ್ಣಿಗೇರಿ ಹೂಗಾರ ಸಮಾಜ ಸೇವಾ ಘಟಕದ ಪ್ರಥಮ ಸಮಾವೇಶ ಹಾಗೂ ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮ ನೆರವೇರಿತು.ದಾಸೋಹಮಠ ಶ್ರೀ ಶಿವಕುಮಾರ ಶ್ರೀಗಳು ಶರಣ ಮಾದಯ್ಯನವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿದರು.ಆರ್.ಆರ್.ಸಂಗಳಕರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಈ ವೇಳೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖ ಗುರಿಕಾರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ, ಪುರಸಭೆ ಅಧ್ಯಕ್ಷೆ ಗಂಗಾ ಕರೆಟ್ಟನವರ, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ, ಅಣ್ಣಿಗೇರಿ ಕಸಾಪ ಘಟಕ ಅಧ್ಯಕ್ಷ ರವಿರಾಜ ವೆರ್ಣೇಕರ, ಅಣ್ಣಿಗೇರಿ ಹೂಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಸೋಮು ಹೂಗಾರ, ಅಣ್ಣಿಗೇರಿ ಪಟ್ಟಣ ಹಾಗೂ ತಾಲೂಕಿನಾದ್ಯಾಂತ ಹೂಗಾರ ಸಮಾಜದವರು, ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

14/09/2022 10:09 pm

Cinque Terre

12.5 K

Cinque Terre

0

ಸಂಬಂಧಿತ ಸುದ್ದಿ