ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಮುನೇನಕೊಪ್ಪ

ಅಣ್ಣಿಗೇರಿ: ನಿನ್ನೆ ರಾತ್ರಿ ಬಿಟ್ಟು ಬಿಡದೆ ಸುರಿದ ವರುಣನ ಆರ್ಭಟಕ್ಕೆ ಪಟ್ಟಣ ಸೇರಿದಂತೆ ತಾಲೂಕು ಗ್ರಾಮಗಳಲ್ಲಿ ಅನೇಕ ಪ್ರಮಾಣದ ಹಾನಿ ಉಂಟಾದ ಹಿನ್ನೆಲೆಯಲ್ಲಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಪಟ್ಟಣದ ಹಳ್ಳಿಕೇರಿ ರಸ್ತೆ, ಹಳೆ ಅಮೃತೇಶ್ವರ ನಗರ, ಲಿಂಬಿಕಾಯಿ ಓಣಿ, ಸುರಕೋಡ್ ಜಿನ್ನಿಂಗ್ ಫ್ಯಾಕ್ಟರಿ ಹಾಗೂ ಅಣ್ಣಿಗೇರಿ ನವಲಗುಂದ್ ಮಾರ್ಗ ಮಧ್ಯೆ ಬರುವ ಬಸಾಪುರದ ಸಮೀಪ ರಸ್ತೆ ಕುಸಿದು ಸಂಚಾರ ಬಂದ್ ಆಗಿದ್ದ ಸ್ಥಳಗಳಿಗೆ ಭೇಟಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು ನೆರೆಹಾವಳಿಯಿಂದ ಸಂಕಷ್ಟಕ್ಕೊಳಗಾದ ನಿವಾಸಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಲಾಗುತ್ತಿದೆ ಹಾಗೂ ಪರಿಹಾರವನ್ನು ಒದಗಿಸಲಾಗುತ್ತದೆ ಎಂದು ಭರವಸೆಯನ್ನು ನೀಡಿದರು.

ಈ ವೇಳೆ ತಾಲೂಕು ನೋಡಲ್ ಅಧಿಕಾರಿಯಾದ ಮಂಜುಳಾ ಯಾಲಿಗಾರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡುವಣಿ,ಪುರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಗ್ರಾಮದ ಮುಖ್ಯಸ್ಥರಾದ ಶ್ರೀ ಶಿವಯೋಗಿ ಸುರಕೋಡ, ಷಣ್ಮುಖ ಗುರಿಕಾರ್, ಸಿಜಿ ನಾವಳ್ಳಿ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

06/09/2022 09:12 pm

Cinque Terre

17.39 K

Cinque Terre

0

ಸಂಬಂಧಿತ ಸುದ್ದಿ