ಅಣ್ಣಿಗೇರಿ: ತಾಲೂಕಿನ ಮಜ್ಜಿಗುಡ್ಡ ಗ್ರಾಮದ ರೈತ ಬಸವರಾಜ್ ಮಾಂತಯ್ಯ ದೊಡ್ಡಮನೆ ಅವರ ಜಮೀನು ಸೇರಿದಂತೆ ಗ್ರಾಮದ ಅನೇಕ ರೈತರ ಜಮೀನುಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಬೆಳೆದ ಹತ್ತಿ ಬೆಳೆಯಲ್ಲ ನೀರು ತುಂಬಿಕೊಂಡು ಬೆಳೆ ಸಂಪೂರ್ಣವಾಗಿ ಹಾನಿಯಾಗಿರುತ್ತದೆ.
ರೈತನಿಗೆ ಮೇಲಿಂದ ಮೇಲೆ ಈ ತರದ ಘಟನೆಗಳು ಆಗುತ್ತಿರುವುದರಿಂದ ರೈತ ಕಂಗಾಲಾಗಿದ್ದಾನೆ. ಈ ಸಲದ ಮುಂಗಾರು ಬೆಳೆಗಳು ರೈತನನ್ನು ಕೈಬಿಟ್ಟಿದ್ದು, ಸರ್ಕಾರ ರೈತರ ಹಿಡಿಯಬೇಕಾಗಿದೆ. ತಕ್ಷಣವೇ ರೈತರಿಗೆ ಬೆಳೆ ಪರಿಹಾರವನ್ನು ನೀಡಿ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಬೇಕಾಗುತ್ತದೆ ಎಂದು ಗ್ರಾಮದ ರೈತರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
Kshetra Samachara
02/09/2022 07:56 am