ಅಣ್ಣಿಗೇರಿ: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ದಿನಾಚರಣೆಯ ಹಿನ್ನೆಲೆಯಲ್ಲಿ ತಾಲೂಕಿನ ಮನಕವಾಡ ಗ್ರಾಮದಲ್ಲಿ ಸರ್ಕಾರಿ ಹಿರಿಯ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಗ್ರಾಮದಲ್ಲಿ ಬರ್ಗರ್ ತಿರಂಗ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಗ್ರಾಮದಲ್ಲಿ ರಾಷ್ಟ್ರಧ್ವಜ ಹಿಡಿದು ವಿನಂತಿಸಿದರು.
ಇದೇ ವೇಳೆ ಮಣಕವಾಡದ ಶ್ರೀಗಳು ಮಾತನಾಡಿ ಪ್ರತಿಯೊಬ್ಬ ನಾಗರಿಕರು ದೇಶದ ರಾಷ್ಟ್ರಧ್ವಜಕ್ಕೆ ನಾವು-ನೀವೆಲ್ಲರೂ ಕೊಡಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯ, ಆಗಿನ ಕಾಲದಲ್ಲಿ ಬಹಳಷ್ಟು ಜನ ಹೊರಾಟ ಮಾಡಿ ಸ್ವತಂತ್ರ ತಂದು ಕೊಟ್ಟಿದ್ದಾರೆ. ಆದರೆ ನಾವು ಈಗ ಹೋರಾಟ ಮಾಡುವುದು ಬೇಡ ರಾಷ್ಟ್ರಧ್ವಜದ ಬಾವುಟವನ್ನು ಹಿಡಿದು ಹಾರಾಟ ಮಾಡಬೇಕಾಗಿದೆ ಎಂದು ಮಾತನಾಡಿದರು.
ಈ ವೇಳೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಗ್ರಾಮದ ಸಾರ್ವಜನಿಕರು ಮತ್ತು ದೇವಸ್ಥಾನದ ಸದ್ಭಕ್ತರು ಉಪಸ್ಥಿತರಿದ್ದರು.
Kshetra Samachara
12/08/2022 06:09 pm