ಅಣ್ಣಿಗೇರಿ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಹೆಸರಿನ ಬೆಳೆಗೆ ಬೂದಿ ರೋಗ ಪ್ರಾರಂಭವಾಗಿದ್ದು,ರೈತರಿಗೆ ತಲೆನೋವಾಗಿ ಪರಿಣಮಿಸಿದೆ.ಇದರ ಜೊತೆಗೆ ಮುಟ್ಟಿಗೆ ರೋಗವು ಸಹ ಬಂದಿರುವುದರಿಂದ ಆತಂಕ ಹೆಚ್ಚಾಗಿದೆ.
ಇನ್ನೂ ಈ ರೋಗಗಳು ಬಂದಿರುವ ಹಿನ್ನೆಲೆಯಲ್ಲಿ ರೈತರು ಔಷಧಿಗಳನ್ನು ಸಿಂಪರಣೆ ಮಾಡುತ್ತಿರುವುದು ದೃಶ್ಯಗಳು ತಾಲೂಕಿನ ಗ್ರಾಮಗಳಲ್ಲಿ ಕಂಡು ಬರುತ್ತಿದೆ. ಮೂರು ನಾಲ್ಕು ವಾರಗಳ ನಂತರ ಹೆಸರಿನ ಬೆಳೆ ಕಟಾವು ಪ್ರಾರಂಭವಾಗಲಿದ್ದು,ಈ ರೋಗಗಳು ರೈತರಲ್ಲಿ ಆತಂಕ ಸೃಷ್ಟಿ ಮಾಡಿದೆ. ಒಟ್ಟಾರೆಯಾಗಿ ಹೆಸರು ಕೈಗೆ ಬರುತ್ತದೆ ಅಥವಾ ಇಲ್ಲವೇ ಎಂಬುದು ರೈತನಿಗೆ ನಂಬಿಕೆ ಇಲ್ಲದಂತಾಗಿದೆ.
Kshetra Samachara
30/07/2022 07:43 am