ಅಣ್ಣಿಗೇರಿ: ಪಟ್ಟಣದ ಆಡಳಿತ ಕಚೇರಿಯಲ್ಲಿ ಅಪ್ಪಣ್ಣನವರ ಜಯಂತಿಯಲ್ಲಿ ಹಡಪದ ಅಪ್ಪಣ್ಣ ಸಮಾಜದ ತಾಲ್ಲೂಕು ಅಧ್ಯಕ್ಷ ರಾದಿಯಾಗಿ ಸರ್ವ ಸದಸ್ಯರು ಪಾಲ್ಗೊಂಡು ಸರಳವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಹಡಪದ ಸಮಾಜದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಸರ್ವ ಸದಸ್ಯರು ಮತ್ತು ತಾಲೂಕಾ ಕಸಾಪ ಅಧ್ಯಕ್ಷರು ಪಟ್ಟಣದ ಹಿರಿಯ ಮುಖಂಡರಾದ ಷಣ್ಮುಖ ಗುರಿಕಾರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಈ ವೇಳೆ ಷಣ್ಮುಖ ಗುರಿಕಾರ ಮಾತನಾಡಿ ಶಿವಶರಣ ಹಡಪದ ಅಪ್ಪಣ್ಣ ಅವರು ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡಿದ ಜೀವನ ಗಾಥೆಯನ್ನು ಸ್ಮರಿಸಿ ಇಂದಿನ ಸಮಾಜದಲ್ಲಿ ಎಲ್ಲಾ ಜನಸಾಮಾನ್ಯರು ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡು ಆದರ್ಶ ಜೀವನವನ್ನು ನಡೆಸಬೇಕೆಂದು ಹಾಗೂ ಅವರ ಚಿಂತನೆಗಳು ಸಿಗುವಂತಾಗಬೇಕು ಎಂದು ಮಾತನಾಡಿದರು.
ಕಸಾಪ ಅಧ್ಯಕ್ಷ ರವಿರಾಜ ವಣಿಕರ ಮಾತನಾಡಿ ಹಡಪದ ಅಪ್ಪಣ್ಣನವರ ಜೀವನಚರಿತ್ರೆಯನ್ನು ಸವಿಸ್ತಾರವಾಗಿ ಹಾಗೂ ಅವರ ವಚನಗಳ ಬಗ್ಗೆ ಮಾತನಾಡಿದರು.
Kshetra Samachara
13/07/2022 02:41 pm