ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಆಧಾರ್ ಕಾರ್ಡ್ ಕೇಂದ್ರ ಪ್ರಾರಂಭಿಸಲು ಮನವಿ

ಅಣ್ಣಿಗೇರಿ: 6 ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಆಧಾರ್ ಕೇಂದ್ರ ತೆರೆಯುವಂತೆ ಪಟ್ಟಣದಲ್ಲಿ ರೈತ ಸಂಘದ ವತಿಯಿಂದ ತಾಲೂಕು ದಂಡಾಧಿಕಾರಿಯವರ ಮುಖಾಂತರ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

6 ವರ್ಷದ ಒಳಗಿನ ಮಕ್ಕಳನ್ನು ಕರೆದುಕೊಂಡು ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳ ಸಾರ್ವಜನಿಕರು ದಿನಂಪ್ರತಿ ನೂರಾರು ಜನರು ಇಲ್ಲಿಂದ ಗದಗ್ ಹುಬ್ಬಳ್ಳಿಗೆ ತೆರಳುತ್ತಿದ್ದಾರೆ ಹಾಗೂ ಸರ್ಕಾರ ಇವತ್ತು ಎಷ್ಟು ಸೌಲಭ್ಯಗಳನ್ನು ಕೊಟ್ಟರು ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಪುರಸಭೆಯ ಉಪಾಧ್ಯಕ್ಷರಾದ ನಿಂಗಪ್ಪ ಬಂಡೆಪ್ಪ ನವರು ಮಾತನಾಡಿದರು.ಈ ವೇಳೆ ನಾರಾಯಣ ಮಾಡಳ್ಳಿ, ಯಲ್ಲಪ್ಪ ಬೆಳಧಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

06/07/2022 07:58 am

Cinque Terre

10.16 K

Cinque Terre

0

ಸಂಬಂಧಿತ ಸುದ್ದಿ