ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಫಲಾನುಭವಿಗಳಿಗೆ ವರ್ಕ್ ಆರ್ಡರ್ ವಿತರಣೆ

ಅಣ್ಣಿಗೇರಿ: ಹಳ್ಳಿಕೇರಿ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರದಿಂದ ಬಿಡುಗಡೆಯಾದ ಬಸವವಸತಿ ಅಂಬೇಡ್ಕರ್ ವಸತಿ ಯೋಜನೆಯ ಫಲಾನುಭವಿಗಳಿಗೆ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ವರ್ಕ್ ಆರ್ಡರ್ ವಿತರಣೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಸಂಜೀವರೆಡ್ಡಿ ಬಾಲರೆಡ್ಡಿ ಅವರು ಮಾತನಾಡಿ ನಮ್ಮ ಕೆಲಸಗಳು ಪಾರದರ್ಶಕ ಇರಲಿ ಎಂಬ ಉದ್ದೇಶದಿಂದ ಹಾಗೂ ಯಾವುದೇ ಕೆಲಸಕ್ಕೆ ಫಲಾನುಭವಿಗಳು ಅಲೆದಾಡಬಾರದು ಎಂಬ ಉದ್ದೇಶದಿಂದ ಫಲಾನುಭವಿಗಳನ್ನು ಕಾರ್ಯಾಲಯಕ್ಕೆ ಕರಿಸಿ ವರ್ಕ್ ಆರ್ಡರ್ ವಿತರಿಸಲಾಗುತ್ತಿದೆ ಎಂದರು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಹಾಗೂ ಅಧಿಕಾರಿಗಳು ಸಿಬ್ಬಂದಿ ವರ್ಗ ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

12/06/2022 10:58 am

Cinque Terre

10.7 K

Cinque Terre

0

ಸಂಬಂಧಿತ ಸುದ್ದಿ