ಅಣ್ಣಿಗೇರಿ: ಶ್ರೀ ಜಗದ್ಗುರು ಅಜಾತ ನಾಗಲಿಂಗ ಸ್ವಾಮಿ ಮಠ ನವಲಗುಂದ ಶಾಖಾಮಠ ಹೊರಕೇರಿ ಓಣಿ ಅಣ್ಣಿಗೇರಿಯಲ್ಲಿ 19ನೆಯ ನಾಗಲಿಂಗ ಗೋಷ್ಠಿ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ವೀರೇಂದ್ರ ಮಹಾಸ್ವಾಮಿಗಳು ನವಲಗುಂದ ಇವರು ವಹಿಸಿದ್ದರು.ಉಪನ್ಯಾಸಕರಾಗಿ ಡಾಕ್ಟರ್ ಎಚ್. ಬಿ.ನೀಲಗುಂದ ಡೀನ್ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ಆಗಮಿಸಿದ್ದರು.
ಇನ್ನೂ ಕಾರ್ಯಕ್ರಮದಲ್ಲಿ ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಪೂರ್ವಕವಾಗಿ ಸನ್ಮಾನ ಮಾಡಿ ಗೌರವಿಸಲಾಯಿತು. ಈ ವೇಳೆ ಶಿಕ್ಷಕರು ಹಾಗೂ ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.
Kshetra Samachara
19/05/2022 07:43 pm