ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಬಸವೇಶ್ವರ ದೇವಸ್ಥಾನದಲ್ಲಿ ಕಳಸಾರೋಹಣ ಹಾಗೂ ಗೋಪುರ ಉದ್ಘಾಟನೆ

ಅಣ್ಣಿಗೇರಿ:ತಾಲೂಕಿನ ತುಪ್ಪದ ಕುರಟ್ಟಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಳಸಾರೋಹಣ ಹಾಗೂ ನೂತನ ಗೋಪುರ ಉದ್ಘಾಟನೆ ಕಾರ್ಯಕ್ರಮ ಜರುಗಿತು.

ಗದಗ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಕಳಸಾರೋಹಣ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಚಾಲನೆ ನೀಡಿದರು. ಇದೇ ವೇಳೆ ಶ್ರೀಗಳಿಂದ ಬಸವ ಜಯಂತಿಯ ಪ್ರಯುಕ್ತ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಪೂರ್ವಕವಾಗಿ ನಮನಗಳನ್ನು ಸಲ್ಲಿಸಲಾಯಿತು.

ಈ ವೇಳೆ ಹಲವಾರು ಮಠದ ಶ್ರೀಗಳು ಸೇರಿದಂತೆ ದೇವಸ್ಥಾನದ ಆಡಳಿತ ವರ್ಗ ಗ್ರಾಮದ ಗುರುಹಿರಿಯರು ಭಕ್ತರು ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

04/05/2022 11:35 am

Cinque Terre

14.4 K

Cinque Terre

0

ಸಂಬಂಧಿತ ಸುದ್ದಿ