ಅಣ್ಣಿಗೇರಿ: ತಾಲೂಕಿನ ಶಿಶ್ವಿನಹಳ್ಳಿ ಗ್ರಾಮದ ಶಿವಬಸವ ನಗರದಲ್ಲಿರುವ ಶ್ರೀ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿಯ ನಿಮಿತ್ಯ ಕಾರ್ಯಕ್ರಮಗಳು ನೆರವೇರಿದವು.
ಇದೇ ವೇಳೆ ರೈತರು ತಮ್ಮ ಎತ್ತುಗಳನ್ನು ಸಿಂಗರಿಸಿ ಮತ್ತು ದೇವರ ಪಲ್ಲಕ್ಕಿಯನ್ನು ಊರಿನ ಪ್ರಮುಖ ರಸ್ತೆಗಳಲ್ಲಿಮೆರವಣಿಗೆ ಮಾಡಲಾಯಿತು. ಈ ವೇಳೆ ಗ್ರಾಮದ ಸಕಲ ಭಕ್ತರು ಸೇರಿದಂತೆ ಗುರು ಹಿರಿಯರು ಸಂಘ ಸಂಸ್ಥೆಯ ಪದಾಧಿಕಾರಿಗಳು ಯುವಕರು ಈ ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆಗೆ ಮೆರಗು ತಂದರು.
Kshetra Samachara
03/05/2022 09:43 pm