ನವಲಗುಂದ: ಯುಗಾದಿ ಉತ್ಸವದ ನಿಮಿತ್ತ ನವಲಗುಂದದಲ್ಲಿ ಇಂದು ನಡೆದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಕೇಸರಿ ಹಾಗೂ ನೀಲಿ ಧ್ವಜಕ್ಕೆ ಸಂಬಂಧ ಪಟ್ಟಂತೆ ಗಲಭೆ ಏರ್ಪಟ್ಟಿದ್ದು, ದಲಿತ ಸಂಘಟನೆಗಳು ಪಟ್ಟಣದ ತಾಲೂಕಾ ಪಂಚಾಯತ್ ಎದುರಿನ ಅಂಬೇಡ್ಕರ್ ಪುಥ್ಥಳಿ ಮುಂದೆ ಪ್ರತಿಭಟನೆಗೆ ಇಳಿದ ಘಟನೆ ನಡೆದಿದೆ.
ಶನಿವಾರ ಸಂಜೆ ಯುಗಾದಿ ಹಬ್ಬದ ಪ್ರಯುಕ್ತ ನವಲಗುಂದ ಪಟ್ಟಣದಲ್ಲಿ ಮೆರವಣಿಗೆ ನಡೆದ ಸಂಧರ್ಭದಲ್ಲಿ ಕೇಸರಿ ಧ್ವಜದ ನಡುವೆ ನೀಲಿ ಧ್ವಜ ಹಾರಿಸಲಾಗಿದ್ದು, ನೀಲಿ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳ ಮುಖಂಡರು ಆರೋಪಿಸಿದರು.
ಈ ಹಿನ್ನೆಲೆ ರಾತ್ರೋರಾತ್ರಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ, ನಾವು ಹಿಂದೂಗಳಲ್ಲವೇ?, ನೀಲಿ ಧ್ವಜಕ್ಕೆ ಯಾಕೆ ಅವಮಾನ ಮಾಡಿದರು ಎಂದು ಪ್ರಶ್ನಿಸಿ, ಪಟ್ಟಣದ ಅಂಬೇಡ್ಕರ್ ಪುತಳಿ ಎದುರು ಧರಣಿ ಪ್ರತಿಭಟನೆಗೆ ಕುಳಿತು, ಸಚಿವರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದರು.
Kshetra Samachara
02/04/2022 11:03 pm