ಕುಂದಗೋಳ: ನಾಳೆಯ ಸಂತ ಶಿಶುನಾಳ ಶರೀಫರ ಜಾತ್ರೆಗೆ ಕುಂದಗೋಳ ಮಾರ್ಗವಾಗಿ ಪ್ರಯಾಣ ಬೆಳೆಸುವ ಚಕ್ಕಡಿ, ಟ್ರ್ಯಾಕ್ಟರ್ ಯಾತ್ರಿಕರಿಗೆ ಇಲ್ಲೊಬ್ಬ ಸಮಾಜ ಸೇವಕ, ಗುಲಾಬಿ ಹೂವು ನೀಡಿ ಸ್ವಾಗತ ಕೋರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಯಾವುದೇ ಲೈಟಿಂಗ್ಸ್ ಇಲ್ಲದೆ ರಾತ್ರಿ ಇಡೀ ಹುಬ್ಬಳ್ಳಿ- ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಸೇರಿದಂತೆ ಇತರ ರಸ್ತೆ ಮಾರ್ಗವಾಗಿ ಪ್ರಯಾಣ ಬೆಳೆಸುವ ಟ್ರ್ಯಾಕ್ಟರ್- ಟಿಲ್ಲರ್ ಹಾಗೂ ಚಕ್ಕಡಿಗಳಿಗೆ ರೇಡಿಯಂ ಅಳವಡಿಸಿ ಅಪಘಾತ ತಡೆಗೆ ತಮ್ಮ ಸೇವೆ ನೀಡುತ್ತಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಸ್ವಂತ ದುಡಿಮೆಯಲ್ಲೇ ಸಮಾಜಸೇವೆ ಮಾಡುತ್ತಿರುವ ಮಂಜುನಾಥ ಯಂಟ್ರೂವಿ ಅವರು ಇಂದು ಕೂಡ ಆ ಸೇವಾ ಕೈಂಕರ್ಯ ಮುಂದುವರಿಸಿದ್ದಾರೆ.
Kshetra Samachara
12/03/2022 11:11 pm