ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದಿ. ಧ್ರುವರಾಜ ಮುತಾಲಿಕ ದೇಸಾಯಿ ಅವರಿಗೆ ನಮನ ಸಲ್ಲಿಸಿದ ಪತ್ರಕರ್ತ ಸಂಘ

ಹುಬ್ಬಳ್ಳಿ: ಪತ್ರಿಕಾ ರಂಗದ ಹಿರಿಯ ಪತ್ರಕರ್ತರು, ಧಾರವಾಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಹಿಂದಿನ ಅಧ್ಯಕ್ಷರೂ ಆಗಿದ್ದ. ದಿ. ಧ್ರುವರಾಜ ಮುತಾಲಿಕ ದೇಸಾಯಿ ಅವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ, ಇಂದು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ, ಪತ್ರಿಕಾ ಭವನದಲ್ಲಿ ಮೌನಾಚರಣೆ ಮಾಡಿ, ಪುಷ್ಪ ಹಾಕುವುದರ ಮೂಲಕ ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣಪತಿ ಗಂಗೊಳ್ಳಿ, ಉಪಾಧ್ಯಕ್ಷರಾದ ಜಗದೀಶ್ ಬುರ್ಲಬುಡ್ಡಿ, ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ, ಯಲ್ಲಪ್ಪ ಕುಂದಗೋಳ, ರೋಹನ ಆರ್.ಎಚ್, ಯಲ್ಲಪ್ಪ ಸೋಲಾರಗೊಪ್ಪ, ಪ್ರಶಾಂತ ಹಿರೇಮಠ, ಮುತ್ತಣ್ಣ ಹಿರೇಮಠ, ದತ್ತಾತ್ರಯ್ಯ ಪಾಟೀಲ್, ಶಿವರಾಮ ಅಸುಂಡಿ ಸೇರಿದಂತೆ ಪತ್ರಕರ್ತರು ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

31/01/2022 05:58 pm

Cinque Terre

49.03 K

Cinque Terre

0

ಸಂಬಂಧಿತ ಸುದ್ದಿ