ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದ್ದು, ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ.
ಇತ್ತೀಚೆಗೆ ಈ ನಕಲಿ ಫೇಸ್‌ಬುಕ್ ಖಾತೆ ತೆರೆದು ಫೇಸ್‌ಬುಕ್ ಸ್ನೇಹಿತರ ಬಳಿ ಹಣ ಕೇಳುವ ದೊಡ್ಡ ಜಾಲವೇ ಹಬ್ಬುತ್ತಿದ್ದು, ಇದೀಗ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಹೆಸರಿನಲ್ಲೂ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಸೈಬರ್ ಕ್ರೈಂಗೆ ದೂರು ನೀಡಿದ್ದು, ಹಣಕ್ಕೆ ಬೇಡಿಕೆ ಇಟ್ಟರೆ ಯಾರೂ ಹಣ ನೀಡದಂತೆ ಮನವಿ ಮಾಡಿದ್ದಾರೆ.
Kshetra Samachara
31/01/2022 05:44 pm