ನವಲಗುಂದ: ವಾರಾಂತ್ಯ ಕರ್ಫ್ಯೂ ನಿಂದಾಗಿ ಪ್ರಯಾಣಿಕರಿಗೆ ಮತ್ತು ಬೀದಿ ಬದಿಯ ವ್ಯಾಪಾರಸ್ಥರಿಗೆ ನೆರವಾಗುವ ದೃಷ್ಟಿಯಿಂದ ಯೂತ್ ಕಾಂಗ್ರೆಸ್‌ನ ಗ್ರಾಮೀಣ ಅಧ್ಯಕ್ಷ ವಿನೋದ ಅಸೂಟಿ ಅವರ ನೇತೃತ್ವದಲ್ಲಿ ಶನಿವಾರ ಉಪಹಾರ ಕಿಟ್ ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ್, ಅಪ್ಪಣ್ಣ ಹಳ್ಳದ, ರವಿ ಬೆಂಡಿಗೇರಿ, ಉಸ್ಮಾನ್ ಬಬರ್ಚಿ, ಜೀವನ್ ಪವಾರ್, ಹಟೆಲ್ ರಾಮದುರ್ಗ, ಹನಮಂತಪ್ಪ ಚಿಕ್ಕಣ್ಣವರ, ಶರೀಫ್ ಗುದಗಿ, ಮೌನೇಶ ರೇವಣ್ಣವರ, ಶಬ್ಬೀರ ಧಾರವಾಡ, ದಾದು ಜಮಖಾನ್, ಬಾಬರ್ ದಫೆದಾರ್, ಮಹಾದೇವ ಚುಂಚನೂರ, ಸುನಿಲ್ ಉಪಸ್ಥಿತರಿದ್ದರು.
Kshetra Samachara
08/01/2022 08:14 pm