ನವಲಗುಂದ : ನವಲಗುಂದ ಪಟ್ಟಣದಲ್ಲಿ ಹಾದು ಹೋಗುವ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಇರುತ್ತಿದೆ. ಹೀಗಾಗಿ ಸ್ಪೀಡ್ ಬ್ರೇಕರ್ ಅಳವಡಿಸುವ ಮೂಲಕ ಅಪಘಾತಗಳನ್ನು ತಡೆಯಬೇಕು ಎಂದು ಮಂಗಳವಾರ ರಾತ್ರಿ ತಾಲ್ಲೂಕಿನ ಬೆಳವಟಗಿ ಗ್ರಾಮಸ್ಥರು ಆಗ್ರಹಿಸಿ, ಮನವಿ ಸಲ್ಲಿಸಿದರು.
ಹೌದು ನವಲಗುಂದದ ಕೆಎಸ್ಆರ್ಟಿಸಿ ಡಿಪೋ ಎದುರುಗಡೆ, ಶಲವಡಿ ಕ್ರಾಸ್ ಹತ್ತಿರ, ಬೆಳವಟಗಿ ಕ್ರಾಸ್ ಹತ್ತಿರ, ನವಲಗುಂದದಿಂದ ಗದಗ ರಸ್ತೆಯ ಚಿಲಕವಾಡಿ, ಬೆಳಹಾರ ಕ್ರಾಸ್ ಹತ್ತಿರ ಅವಶ್ಯವಾಗಿ ಸ್ಪೀಡ್ ಬ್ರೇಕರ್ ಅಳವಡಿಸಬೇಕು. ಮತ್ತು ತಾಲೂಕಿನ ಕೇಂದ್ರವಾದ ನವಲಗುಂದಕ್ಕೆ 108 ಎಮರ್ಜೆನ್ಸಿ ಆಂಬುಲೆನ್ಸ್ ಅವಶ್ಯಕ ಇದೆ. ತಾಲೂಕಿನ ಆಸ್ಪತ್ರೆಯ ಎಮರ್ಜೆನ್ಸಿ ಚಿಕಿತ್ಸೆ ಮೇಲ್ದರ್ಜೆಗೆ ಏರಿಸಬೇಕು ಎಂದು ನವಲಗುಂದದ ಆದಿಜಾಂಬವ ಯುವ ಸಮಿತಿ ತಾಲೂಕ ಅಧ್ಯಕ್ಷ ಶಿವು ಪೂಜಾರ ಅವರ ನೇತೃತ್ವದಲ್ಲಿ ಬೆಳವಟಗಿ ಗ್ರಾಮಸ್ಥರು ಆಗ್ರಹಿಸಿ, ನವಲಗುಂದ ಪೋಲಿಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ ಅವರಿಗೆ ಮನವಿ ಸಲ್ಲಿಸಿದರು.
Kshetra Samachara
05/01/2022 09:39 am