ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೊಸ ವರ್ಷ: ಕೇಕ್‌ಗೆ ಹೆಚ್ಚಿದ ಭಾರೀ ಬೇಡಿಕೆ

ಧಾರವಾಡ: ಪ್ರಸಕ್ತ ವರ್ಷ ಕೂಡ ಕೊರೊನಾ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿದ್ದರೂ ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕೇಕ್‌ಗೆ ಭಾರೀ ಬೇಡಿಕೆ ಬಂದಿದೆ.

ನಾಳೆ 2022ನ್ನು ಸ್ವಾಗತಿಸಲು ಜನತೆ ಸಿದ್ಧವಾಗಿದ್ದಾರೆ. ಅದರ ಮುನ್ನಾ ದಿನವಾದ ಶುಕ್ರವಾರ ಧಾರವಾಡದಲ್ಲಿ ಕೇಕ್‌ಗಳ ಖರೀದಿ ಜೋರಾಗಿ ನಡೆದಿದೆ. ಕಳೆದ ಬಾರಿಗಿಂತ ಈ ಬಾರಿ ಕೇಕ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೊಸ ವರ್ಷಾಚರಣೆಯ ಸಂಭ್ರಮಕ್ಕಾಗಿ ಸಾರ್ವಜನಿಕರು ಕೇಕ್‌ಗಳನ್ನು ಖರೀದಿ ಮಾಡುತ್ತಿದ್ದಾರೆ.

ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ಸಂಭ್ರಮಾಚರಣೆ ಮಾಡಲು ಸಜ್ಜಾಗಿದ್ದಾರೆ. ಹೀಗಾಗಿ ಕೇಕ್‌ಗಳನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ. ಧಾರವಾಡದ ಬೇಕರಿಗಳಲ್ಲಿ ಕೇಕ್ ತಯಾರಿಕೆ ಜೋರಾಗಿ ನಡೆದಿದೆ.

Edited By : Nagesh Gaonkar
Kshetra Samachara

Kshetra Samachara

31/12/2021 06:19 pm

Cinque Terre

52.07 K

Cinque Terre

0

ಸಂಬಂಧಿತ ಸುದ್ದಿ