ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೋಟೆಲ್ ಮ್ಯಾನೆಜಮೆಂಟ್ ವಿಭಾಗದಲ್ಲಿ ಅಲ್ಪಾವಧಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಧಾರವಾಡ: ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಯೋಜನೆ ಅಡಿಯಲ್ಲಿ ಪ್ಮಡ್ ಪ್ರೊಡಕ್ಷನ್ ಬೇಕರಿ ಆಂಡ್ ಕನಫೆಕ್ಷನರಿ, ಫುಡ್ ಅಂಡ್ ಬೆವರೇಜ್ ಸರ್ವೀಸ್, ಫ್ರೆಂಟ್ ಆಫೀಸ್ ಮತ್ತು ಹೌಸ್ ಕೀಪಿಂಗ್ ವಿಭಾಗಗಳಲ್ಲಿ ಉಚಿತವಾಗಿ ಅಲ್ಪಾವಧಿ ತರಬೇತಿ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

18 ರಿಂದ 35 ವರ್ಷದೊಳಗಿನ ಅರ್ಹ ಆಸಕ್ತ ಅಭ್ಯರ್ಥಿಗಳು ಫುಡ್ ಕ್ರಾಫ್ಟ್ ಇನ್‍ಸ್ಟಿಟ್ಯೂಟ್, ಕನ್ನಡ ಕಾರಂಜಿ ಕಟ್ಟಡದ ಮೊದಲನೆ ಮಹಡಿ, ದಸರಾ ವಸ್ತು ಪ್ರದರ್ಶನ ಆವರಣ ಇಟ್ಟಿಗೆಗೂಡು ಮೈಸೂರು ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ 0821-2445388, 6362018821 ಗೆ ಹಾಗೂ www.fcimysuru.com ಗೆ ಸಂಪರ್ಕಿಸಬಹುದೆಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

22/12/2021 09:46 pm

Cinque Terre

6.51 K

Cinque Terre

0

ಸಂಬಂಧಿತ ಸುದ್ದಿ