ಧಾರವಾಡ: ವಿಶ್ವ ಅಂಗವಿಕಲ ದಿನಾಚಾರಣೆ ಅಂಗವಾಗಿ ಧಾರವಾಡದ ಅಂಜುಮನ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಿಂದ ವಿಕಲ ಚೇತನರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಮಹಾವಿದ್ಯಾಲಯದಲ್ಲಿ ಮುಷ್ಠಿ ಅನ್ನ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ವಿದ್ಯಾರ್ಥಿಗಳಿಂದ ಮುಷ್ಠಿ ರೂಪದಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಲಾಗಿತ್ತು. ಹೀಗೆ ಸಂಗ್ರಹಿಸಿದ ಅಕ್ಕಿ ಮತ್ತು ಗೋಧಿಯನ್ನು ಅಂಗವಿಕಲರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಡಾ.ಮಾಕಾಂದಾರ, ಡಾ.ಎಸ್.ವೈ.ಶೇಖ್, ಡಾ.ಆಸ್ಮಾ ಬಳ್ಳಾರಿ, ಡಾ.ನಾಗರಾಜ ಗುದಗನವರ್, ಪ್ರೊ. ಮಕ್ಸುದ್ ಜವಳಿ, ಡಾ.ಐ.ಎ.ಮುಲ್ಲಾ, ಡಾ.ನದಾಫ್ ಇದ್ದರು.
Kshetra Samachara
11/12/2021 07:01 pm