ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅಡ್ಡಾದಿಡ್ಡಿ ಬಸ್ ಚಾಲನೆ: ಚಾಲಕನಿಗೆ ಬಿಸಿ ಮುಟ್ಟಿಸಿದ ಪ್ರಯಾಣಿಕರು

ನವಲಗುಂದ : ಮಂತ್ರಾಲಯದಿಂದ ಧಾರವಾಡ, ಹಳಿಯಾಳದ ಕಡೆಗೆ ಬರುತ್ತಿದ್ದ ಬಸ್ಸಿನ ಚಾಲಕ ಅಡ್ಡಾದಿಡ್ಡಿ ಬಸ್ಸ್ ಚಲಾಯಿಸಿದ್ದ ಕಾರಣಕ್ಕಾಗಿ ಗರಂ ಆದ ಪ್ರಯಾಣಿಕರು ಚಾಲಕನಿಗೆ ತರಾಟೆಗೆ ತೆಗೆದುಕೊಂಡ ಘಟನೆ ನವಲಗುಂದದ ಬಳಿ ಶನಿವಾರ ಸಂಜೆ ನಡೆದಿದೆ.

ಹೌದು ಬಸ್ಸ ಸಂಪೂರ್ಣ ಭರ್ತಿಯಾಗಿತ್ತು. ಈ ಸಂಧರ್ಭದಲ್ಲಿ ಮಹಿಳೆಯರು ಸೇರಿದಂತೆ ವೃದ್ಧರು ಬಸ್ ನ ಕೊನೆಯ ಸೀಟುಗಳಲ್ಲಿ ಕುಳಿತಿದ್ದರು. ಚಾಲಕ ವೇಗ ಮತ್ತು ಅಡ್ಡಾದಿಡ್ಡಿ ಚಲಾಯಿಸಿದ ಪರಿಣಾಮ ಮಹಿಳೆಯರು ವೃದ್ಧರಿಗೆ ಕೊಂಚ ಏಟು ಬಿದ್ದಂತಾಗಿದೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಚಾಲಕನಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

05/12/2021 09:01 am

Cinque Terre

19.01 K

Cinque Terre

1

ಸಂಬಂಧಿತ ಸುದ್ದಿ