ನವಲಗುಂದ : ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಾಗಿ ಒತ್ತಾಯಿಸಿ, ಶುಕ್ರವಾರ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರ ಫೆಡರೇಷನ್ ವತಿಯಿಂದ ನವಲಗುಂದ ತಾಲೂಕು ದಂಡಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ವೇಳೆ ನಿರ್ದಿಷ್ಟ ಕಾಲಮಿತಿಯೊಳಗೆ ಉಚಿತವಾಗಿ ವ್ಯಾಕ್ಸಿನೇಷನ್ ಮಾಡುವುದು, ಸುರಕ್ಷತಾ ಸಾಧನಗಳನ್ನು ಒದಗಿಸುವುದು ಕೋವಿಡ್-19 ಟೆಸ್ಟ್ ಕಡ್ಡಾಯವಾಗಿ ಮಾಡಿಸಿ ಸೋಂಕಿನಿಂದ ರಕ್ಷಿಸುವುದು, ಜಿಡಿಪಿಯ ಶೇಕಡ 6ರಷ್ಟು ಹಣವನ್ನು ಆರೋಗ್ಯ ಇಲಾಖೆಗೆ ಮೀಸಲಿಟ್ಟು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಮೂಲಭೂತ ಸೌಕರ್ಯಗಳಾದ ಆಮ್ಲಜನಕ ಮೊದಲಾದವುಗಳನ್ನು ಒದಗಿಸುವುದು, 50 ಲಕ್ಷ ರೂಗಳ ಆರೋಗ್ಯ ವಿಮೆ ಮಾಡಿಸುವುದರ ಮೂಲಕ ಸೇವೆಯಲ್ಲಿದ್ದಾಗ ನಿಧನರಾದವರಿಗೆ ಸೌಲಭ್ಯ ಕಲ್ಪಿಸುವುದು, ಹೆಚ್ಚುವರಿಯಾಗಿ ಮಾಸಿಕ 10 ಸಾವಿರ ರೂಗಳನ್ನು ಕೋವಿಡ್ -19 ರ ಭತ್ಯೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
Kshetra Samachara
24/09/2021 05:46 pm