ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಬಸ್ ವ್ಯವಸ್ಥೆಗೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ಕಲಘಟಗಿ: ಪಟ್ಟಣದ ಬಸ್ ನಿಲ್ದಾಣದ ಎದುರಿಗೆ ಶಾಲಾ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಗುರುವಾರ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿದರು.

ಹುಬ್ಬಳ್ಳಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಬಂದ್ ಮಾಡಿದ ವಿದ್ಯಾರ್ಥಿಗಳು,ತುಮರಿಕೊಪ್ಪ,ಹುಲ್ಲಂಬಿ,ಎಮ್ಮಟ್ಟಿ,ಮುತ್ತಗಿ,ಗಂಭ್ಯಾಪುರ,ಶಿಗ್ಗಟ್ಟಿ ಗ್ರಾಮಗಳಿಗೆ ತೆರಳಲು ಸಂಜೆ ನಾಲ್ಕು‌ ಗಂಟೆಯಿಂದ ಏಳು ಗಂಟೆಯಾದರು ಬಸ್ ಬರದೇ ಇರುವುದರಿಂದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.ಇದೇ ರೀತಿ ಬೆಳಿಗ್ಗೆಯೂ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹಂಚಿಕೊಂಡರು.

ರಾಷ್ಟ್ರೀಯ ಹೆದ್ದಾರಿಯ ಸಂಚಾರ ಬಂದ್ ಮಾಡಿದ ಪರಿಣಾಮ ‌ಕೆಲ ಹೊತ್ತು ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.ಸ್ಥಳೀಯ ಪೊಲೀಸರು ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳು ಮನ ಒಲಸಿ ಪ್ರತಿಭಟನೆ ತೆರವು ಮಾಡಿಸಿ ಸಂಚಾರಕ್ಕೆ ಅನಕೂಲ ಮಾಡಿದರು.

ಬಸ್ ಡಿಪೋ ಸ್ಥಾಪನೆಆದರು ವಿದ್ಯಾರ್ಥಿಗಳ ಬಸ್ ಸಮಸ್ಯೆಗೆ ಪರಿಹಾರ ಸಿಗದೆ ಇರವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

Edited By : Manjunath H D
Kshetra Samachara

Kshetra Samachara

12/02/2021 10:18 am

Cinque Terre

48.95 K

Cinque Terre

0

ಸಂಬಂಧಿತ ಸುದ್ದಿ