ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಒಡೆದ ಗ್ಯಾಸ್ ಪೈಪ್ ಲೈನ್:ಸಾರ್ವಜನಿಕರಲ್ಲಿ ಆತಂಕ

ಹುಬ್ಬಳ್ಳಿ: ಅಡುಗೆ ಅನಿಲದ ಪೈಪ್ ಲೈನ್ ಒಡೆದ ಪರಿಣಾಮ ಸುಮಾರು ಹೊತ್ತು ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದ ಘಟನೆಯೊಂದು ಹುಬ್ಬಳ್ಳಿಯ ಹಳೇ ಬಾದಾಮಿನಗರದ 1ನೇ ಕ್ರಾಸಿನಲ್ಲಿ ನಡೆದಿದೆ.

ಐಒಎಜಿ ಒಡೆತನದ ಪೈಪ್ ಲೈನ್ ಮಧ್ಯಾಹ್ನ 1ಗಂಟೆ ಸುಮಾರಿಗೆ ಒಡೆದಿದ್ದು,ಸ್ಥಳೀಯರು ಆತಂಕಗೊಂಡಿದ್ದರು.ಇನ್ನೂ ಸ್ಥಳಕ್ಕೆ ದೌಡಾಯಿಸಿದ ಐಒಎಜಿ ಸಿಬ್ಬಂದಿಗಳು ಮೇನ್ ವಾಲ್ ಬಂದ್ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು.ಅಲ್ಲದೇ ಕೂಡಲೇ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿದರು. ಅಲ್ಲದೇ ಗ್ಯಾಸ್ ಇಲ್ಲದೆ ಅಡುಗೆ ಮಾಡಲು ಮಹಿಳೆಯರು ಪರದಾಡುವಂತಾಯಿತು.ಭಾನುವಾರ ಕೂಡ ಇದೇ ಸ್ಥಳದಲ್ಲಿ ಗ್ಯಾಸ್ ಪೈಪ್ ಲೈನ್ ಒಡೆದು ಮೂರು ಗಂಟೆಗಳ ಕಾಲ ಸಂಪರ್ಕ ಕಡಿತಗೊಂಡಿತ್ತು..

Edited By : Manjunath H D
Kshetra Samachara

Kshetra Samachara

08/02/2021 03:02 pm

Cinque Terre

38.47 K

Cinque Terre

4

ಸಂಬಂಧಿತ ಸುದ್ದಿ