ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ತಾಳೆ ಎಣ್ಣೆಯ ಮೇಲೆ ಸೆಸ್ ಹೇರಿಕೆ! ಗ್ರಾಹಕರ ಪರದಾಟ

ಹುಬ್ಬಳ್ಳಿ: ದೇಶದ ಜನತೆ ಈಗಾಗಲೇ ಕೊರೊನಾ ತತ್ತರಿಸಿದ್ದಾರೆ. ಈ ಬೆನ್ನಲ್ಲೇ ಆಹಾರ ಪದಾರ್ಥಗಳ ಹಣದುಬ್ಬರ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆ ಎನಿಸಿದೆ. ಕೊರೊನಾ ಕಾರಣದಿಂದಾಗಿ ಕೆಲಸ ಕಳೆದುಕೊಂಡವರಿಗೆ ದಿಗಿಲು ಹುಟ್ಟಿಸುವ ಪ್ರಮಾಣದಲ್ಲಿ ಬೆಲೆ ಏರಿಕೆಯಾಗುತ್ತಿದೆ. ಅದರಲ್ಲೂ ಅಡುಗೆ ಎಣ್ಣೆ ಬೆಲೆ ಗಗನಮುಖಿಯಾಗಿರುವುದು ಜನತೆಯ ಜೇಬು ಸುಡುತ್ತಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ, ದೈನಂದಿನ ಬಳಕೆಯ ಅಡುಗೆ ಎಣ್ಣೆ ಬೆಲೆ ಕೂಡ ಶೇ.35 ರಿಂದ 45 ರಷ್ಟು ಏರಿಕೆಯಾಗಿದೆ. ಇದರಿಂದ ಸಾಮಾನ್ಯ ವರ್ಗದ ಜನ ತತ್ತರಿಸಿ ಹೋಗಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ಪ್ರತಿ ಲೀಟರ್‌ಗೆ 100 ರೂಪಾಯಿಗೂ ಕಡಿಮೆ ಇದ್ದ ಅಡುಗೆ ಎಣ್ಣೆ ಬೆಲೆ, ಇದೀಗ ದಿಢೀರ್‌ ಹೆಚ್ಚಾಗಿದ್ದು, 130 ರಿಂದ 140 ರೂಪಾಯಿವರೆಗೆ ಹೆಚ್ಚಾಗಿದೆ. ತಾಳೆ ಎಣ್ಣೆ ಬೆಲೆ ಆರು ತಿಂಗಳ ಹಿಂದೆ ಪ್ರತಿ ಲೀಟರ್‌ಗೆ 60 ರಿಂದ 70 ರೂಪಾಯಿಯಷ್ಟು ಇತ್ತು. ಈಗ 100 ರಿಂದ 120 ರೂಪಾಯಿಗೆ ಏರಿಕೆಯಾಗಿದೆ.

ಈ ಹಿಂದೆ ವಿದೇಶಗಳಿಂದ ಪಾಮ್ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದರಿಂದ ಬೆಲೆಯನ್ನು ನಿಯಂತ್ರಣ ಸಾಧ್ಯವಾಗಿತ್ತು. ಆದರೆ, ಕೊರೊನಾ ಲಾಕ್‌ಡೌನ್‌ ನಂತರ ಪಾಮ್‌ ಆಯಿಲ್‌ ಆಮದಿಗೆ ತಾತ್ಕಾಲಿಕ ಅಡ್ಡಿಯಾಗಿದೆ. ಇದರಿಂದಾಗಿ ಅಡುಗೆ ಎಣ್ಣೆ ಕೊರತೆ ಉಂಟಾಗಿರುವುದು ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಸೆಸ್ ಜಾರಿಯಿಂದ ಮಧ್ಯಮ ವರ್ಗದ ಜನರು ಪರದಾಡುವಂತಾಗಿದೆ. ಎಣ್ಣೆ ಬೆಲೆಗಿಂತ ಅವುಗಳ ಮೇಲೆ ಹಾಕಿರುವ ತೆರಿಗೆಗಳನ್ನೆ ಸರ್ಕಾರ ಕಡಿಮೆ ಮಾಡಬೇಕು ಎಂಬುದು ವರ್ತಕರ ಅಭಿಪ್ರಾಯವಾಗಿದೆ.

ಇದಲ್ಲದೆ ಈ ವರ್ಷ ಅತಿವೃಷ್ಟಿಯಿಂದಾಗಿ ಶೇಂಗಾ, ಸೂರ್ಯಕಾಂತಿ, ಸೋಯಾಬೀನ್ ಬೆಳೆಗಳಿಗೆ ಹಾನಿಯಾಗಿದ್ದು, ಎಣ್ಣೆ ಬೀಜಗಳ ಉತ್ಪಾದನೆಯಲ್ಲೂ ಇಳಿಕೆಯಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆ ಉಂಟಾಗಿದೆ. ಆದ್ರೆ ಕೇಂದ್ರವು ವಿಧಿಸಿದ ಸೆಸ್‌ನ ಪರಿಣಾಮವಾಗಿ ತಾಳೆ ಎಣ್ಣೆ ಬೆಲೆ ಹೆಚ್ಚಾಗಿದ್ದು, ಲಾಕ್ ಡೌನದ ಪೂರ್ವದಲ್ಲಿ ಇದ್ದ ಪ್ರತಿ ಅಡುಗೆ ಎಣ್ಣೆಯ ಬೆಲೆಗಿಂದ ಶೇ.35 ರಷ್ಟು ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ..

ಒಟ್ಟಿನಲ್ಲಿ ಅಡುಗೆ ಎಣ್ಣೆಯ ಬೆಲೆಗಿಂತ ಅದರ ಮೇಲಿನ ತೆರಿಗೆ ಭಾರವಾಗಿದ್ದು, ಕೇಂದ್ರ ಸರ್ಕಾರ ಅನಗತ್ಯ ತೆರಿಗೆಗಳಿಗೆ ಕಡಿವಾಣ ಹಾಕಿ ಜನಸಾಮಾನ್ಯರ ಹಿತ ಕಾಪಾಡಬೇಕಿದೆ.....!

ಈರಣ್ಣ ವಾಲಿಕಾರ,,,,

Edited By : Manjunath H D
Kshetra Samachara

Kshetra Samachara

08/02/2021 01:02 pm

Cinque Terre

35.09 K

Cinque Terre

5

ಸಂಬಂಧಿತ ಸುದ್ದಿ