ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇದ್ದೊಬ್ಬ ಮಗನನ್ನು ಕಳೆದುಕೊಂಡ ಕುಟುಂಬ! ಜೀವ ವಿಮಾ ಪರಿಹಾರಕ್ಕಾಗಿ ಪರದಾಟ

ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಹೂವಿನಶಿಗ್ಲಿ ಗ್ರಾಮದ ಮೌನೇಶಪ್ಪ ಶಂಬಣ್ಣವರ ಎಂಬುವವರು, ತಮ್ಮ ಮಗ ವೀರಭದ್ರಪ್ಪ ಹೆಸರಿನಲ್ಲಿ, ಪ್ರಧಾನ ಮಂತ್ರಿ ಸುರಕ್ಷಾ ಜೀವ ವಿಮೆ ಮಾಡಿಸಿದ್ದರು. ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಯಲುವಿಗಿ ಗ್ರಾಮದಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ 12 ರೂಪಾಯಿ ಜೀವ ವಿಮೆ ಮಾಡಿಸಿದ ಬಳಿಕ, ವೀರಭದ್ರಪ್ಪ ಸಾವನ್ನಪ್ಪಿದ್ದಾರೆ. ನಂತರ ವೀರಭದ್ರಪ್ಪ ಸಾವನ್ನಪ್ಪಿದ ಎಲ್ಲ ದಾಖಲೆಗಳನ್ನು ಜೀವ ವಿಮಾ ಹಣಕ್ಕಾಗಿ ಯಲುವಿಗಿಯಲ್ಲಿರುವ ಕೆವಿಜಿ ಬ್ಯಾಂಕ್ ಗೆ ನೀಡಿದ್ದಾರೆ. ಆದರೆ ಬ್ಯಾಂಕ್ ಅಧಿಕಾರಿಗಳು ವಿಮಾ ಕಂಪನಿಗೆ ಆ ದಾಖಲೆಗಳನ್ನು ನೀಡಲು ವಿಳಂಬ ಮಾಡಿದ್ದಾರೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ವಿಮಾ ಹಣಕ್ಕಾ ಕುಟುಂಬಸ್ಥರು ಪರದಾಡುವಂತಾಗಿದೆ. ಹಿಗಾಗಿ ಹಾವೇರಿಯಿಂದ ಧಾರವಾಡದ ಪ್ರಮುಖ ಕಚೇರಿಗೆ ನಿತ್ಯ ಅಲೆದಾಡಿದರು ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು, ಕುಟುಂಬಸ್ಥರು ಹುಬ್ಬಳ್ಳಿಗೆ ಬಂದು ಮಾಧ್ಯಮದ ಮುಂದೆ ಆಕ್ರೋಶ ಹೊರಹಾಕಿದ್ದಾರೆ..

ಇರೋ ಒಬ್ಬ ಮಗನನ್ನು ಕಳೆದುಕೊಂಡ ನೂವು ಒಂದು ಕಡೆಯಾದರೆ, ಇತ್ತ ಬ್ಯಾಂಕ್ ಅಧಿಕಾರಿಗಳು ವಿಮೆ ಹಣವನ್ನು ಕೊಡದೆ ಸತಾಯಿಸುತ್ತಿದ್ದಾರೆ. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಕೆವಿಜಿ ಬ್ಯಾಂಕ್ ನಲ್ಲಿ ವಿಮಾ ಮಾಡಿದ್ರೆ, ಕಂಪನಿ ಎರಡು ಲಕ್ಷ ರೂಪಾಯಿ ಜೀವವಿಮೆ ಹಣವನ್ನು ನೀಡುತ್ತದೆ. ಆದ್ರೆ, ಕೆವಿಜಿ ಬ್ಯಾಂಕ್ ಅಧಿಕಾರಿಗಳು ದಾಖಲೆಗಳನ್ನು ಸರಿಯಾದ ಸಮಯಕ್ಕೆ ನೀಡದೇ ಮಾಡಿದ ಎಡವಟ್ಟಿನಿಂದ ಪರಿಹಾರದ ಹಣ ಸಿಗ್ತಿಲ್ಲ. ಇತ್ತ ಇನ್ಶುರೆನ್ಸ್‌ ಕಂಪನಿ ದಾಖಲೆಗಳನ್ನು ಒಂದು ವರ್ಷದವರೆಗೂ ಕೊಡಲು ಸಮಯಾವಕಾಶ ಇದೆ ಎಂದು ಹೇಳಿದೆ. ಕಳೆದ ಎರಡು ವರ್ಷದಿಂದ ವಿಮಾ ಹಣಕ್ಕಾಗಿ ಕುಟುಂಬಸ್ಥರು ಅಲೆದಾಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕುಟುಂಬಸ್ಥರ ಸಂಕಷ್ಟಕ್ಕೆ ನೆರವಾಗಬೇಕೆಂದು ಸಂಬಂಧಿಕರು ಆಗ್ರಹಿಸಿದರು.

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಬಡವರ ಅನೂಕಲಕ್ಕಾಗಿ ಕೆಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ ಅಧಿಕಾರಿಗಳ ಬೇಜವಾಬ್ದಿತನದಿಂದ ಯೋಜನೆಯ ಲಾಭ ಪಲಾನುಭವಿಗಳಿಗೆ ಸಿಗುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದೇವರು ಕೊಟ್ಟರೂ ಪೂಜಾರಿ ಕೊಡ್ತಿಲ್ಲ ಅನ್ನೋ ಹಾಗಾಗಿದೆ.

Edited By : Manjunath H D
Kshetra Samachara

Kshetra Samachara

07/02/2021 09:46 am

Cinque Terre

42.14 K

Cinque Terre

20

ಸಂಬಂಧಿತ ಸುದ್ದಿ