ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸದಾಶಿವ ಆಯೋಗ ವರದಿ ಜಾರಿಗೊಳಿಸಿ

ಧಾರವಾಡ: ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ಆರಂಭವಾಗಿರುವ ಮಾದಿಗ ಚೈತನ್ಯ ರಥಯಾತ್ರೆಗೆ ಶುಕ್ರವಾರ ಧಾರವಾಡದ ಸತ್ತೂರಿನ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು.

ಸತ್ತೂರಿನ ಆಶ್ರಯ ಕಾಲೊನಿಯಲ್ಲಿ ರಥಯಾತ್ರೆಗೆ ಭವ್ಯ ಸ್ವಾಗತದ ನಂತರ, ನಗರದ ಕಲಾಭವನದಿಂದ ಪೂರ್ಣಕುಂಭ ಮೆರವಣಿಗೆ ಆರಂಭಗೊಂಡು ವಿವಿಧಡೆ ಸಂಚರಿಸಿ, ನಗರದ ಮಾಳಾಪೂರದಲ್ಲಿ ಬೃಹತ್ ಸಮಾವೇಶವಾಗಿ ಮಾರ್ಪಟ್ಟಿತು.

ಈ ವೇಳೆ ಮಾತನಾಡಿದ ಲಕ್ಷ್ಮೀನಾರಾಯಣ, ಮಾದಿಗ ಸಮಾಜ ಅನೇಕ ವರ್ಷಗಳಿಂದ ತುಳಿತಕ್ಕೆ ಒಳಪಟ್ಟಿದೆ.

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ, ಮಾದಿಗ ಸೇರಿ 74 ಉಪಜಾತಿಗೆ ಶೇ.6, ಚಲವಾದಿ ಸೇರಿ 27 ಉಪಜಾತಿಗೆ ಶೇ.5, ಇತರೆ ಜಾತಿಗೆ ಶೇ.3 ಹಾಗೂ ಉಳಿದವರಿಗೆ ಶೇ.1ರಷ್ಟು ಹೀಗೆ ಶೇ.15 ರಷ್ಟು ಮೀಸಲಾತಿ ಕಲ್ಪಿಸಿದೆ ಎಂದರು.

ಈ ವರದಿ 2012 ರಲ್ಲಿಯೇ ರಾಜ್ಯ ಸರ್ಕಾರದ ಕೈ ಸೇರಿದರೂ, ಆಳುವ ಸರ್ಕಾರಗಳು ಕಾಲಕಾಲಕ್ಕೆ ವರದಿಯನ್ನು ಉಪೇಕ್ಷಿಸುತ್ತಲೇ ಬಂದಿವೆ. ಹೀಗಾಗಿ ಸರ್ಕಾರದ ಕಣ್ಣು ತೆರೆಸಲು ಮಾದಿಗ ಚೈತನ್ಯ ರಥಯಾತ್ರೆ ಹಮ್ಮಿಕೊಂಡಿದೆ ಎಂದರು.

ಮುಖಂಡರಾದ ಮೇಹಶ ಹುಲ್ಲೆನ್ನವರ, ಸಂಗಮೇಶ ಮಾದರ, ಗುರದೇವ ಕಳ್ಳಿಮನಿ, ಸಂತೋಷ ಸವಣೂರ, ಚಂದ್ರು ಹುಲ್ಲೆಣ್ಣವರ, ಬಸವರಾಜ ಚಳಗೇರಿ, ಸಂತೋಷ ನಾಗಮ್ಮನವರ, ರಾಕೇಶ ದೊಡಮನಿ, ಅಶೋಕ ದೊಡಮನಿ ಇದ್ದರು.

Edited By : Nagaraj Tulugeri
Kshetra Samachara

Kshetra Samachara

05/02/2021 07:37 pm

Cinque Terre

14.53 K

Cinque Terre

1

ಸಂಬಂಧಿತ ಸುದ್ದಿ