ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸೂಕ್ತ ರಸ್ತೆಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಕುಂದಗೋಳ : ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಅದರಗುಂಚಿ ಹಾಗೂ ಕೊಟಗೊಂಡಹುಣಸಿ ಪ್ಲಾಟ್ ಗ್ರಾಮಸ್ಥರು ತಮ್ಮ ಪ್ಲಾಟ್ ಸೇರಲು ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಲು ಅಶ್ವಥ್ ಬೀಜವಾಡ ನೇತೃತ್ವದಲ್ಲಿ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬುಡರಸಿಂಗಿ, ಅದರಗುಂಚಿ, ಹಾಗೂ ಕೊಟಗೊಂಡಹುಣಸಿ ಮೂರು ಗ್ರಾಮಗಳ ಪ್ಲಾಟ್ ನಿವಾಸಿಗಳಿಗೆ ನಿತ್ಯ ದೈನಂದಿನ ಚಟುವಟಿಕೆ ಹೊರಗಡೆ ಸಂಚರಿಸಲು ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಮಾಡಬೇಕು.

ಈ ಪರಿಣಾಮ ವಾಹನ ಅಪಘಾತ ಸೇರಿದಂತೆ ಪಾದಾಚಾರಿ ವೃದ್ಧರು ಅಂವಿಕಲರಿಗೆ ನಿತ್ಯ ಭಯದ ವಾತಾವರಣ ಕಾಡುತ್ತಿದೆ. ಇನ್ನು ವಾಹನ ಸವಾರರು ಪ್ಲಾಟ್ ದಾಟಲು ಅಪಘಾತದ ಭಯವಿದೆ. ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ ವಾಹನಗಳು ವೇಗವಾಗಿರುವ ಕಾರಣ ರಸ್ತೆ ಕ್ರಾಸ್ ಮಾಡುವುದು ಬಹುದೊಡ್ಡ ಸವಾಲಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಮೂರು ಗ್ರಾಮಗಳ ಜನರು ಪ್ಲಾಟ್ ಸಂಪರ್ಕ ಮಾಡಲು ಅಂಡರ್ ಬ್ರೀಡ್ಜ್ ಸೇರಿದಂತೆ ಇತರೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಪ್ರತಿಭಟನೆ ನಡೆಸಿದರು.

ಬಳಿಕ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸ್ಥಳಕ್ಕೆ ಆಗಮಿಸಿ ಬ್ರಿಡ್ಜ್ ನಿರ್ಮಿಸುವ ವಿಶ್ವಾಸ ನೀಡಿದಾಗ ಮನವಿ ನೀಡಿ ಸಾರ್ವಜನಿಕರು ಪ್ರತಿಭಟನೆ ಸ್ಥಗಿತಗೊಳಿಸಿದರು.

Edited By : Manjunath H D
Kshetra Samachara

Kshetra Samachara

05/02/2021 03:25 pm

Cinque Terre

31.91 K

Cinque Terre

0

ಸಂಬಂಧಿತ ಸುದ್ದಿ