ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸಾಲ ಮನ್ನಾಕೆ ಆಗ್ರಹಿಸಿ ಬ್ಯಾಂಕ್ ಎದುರು ಜಮಾಯಿಸಿದ ರೈತರು

ಕುಂದಗೋಳ : ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ನಲ್ಲಿ ಸಾಲ ಪಡೆದ ರೈತರು ಸಾಲ ಮನ್ನಾ ಮಾಡಲು ಹಳ್ಯಾಳ ಗ್ರಾಮದಲ್ಲಿ ಬ್ಯಾಂಕ್ ಎದುರು ಜಮಾಯಿಸಿದ ಘಟನೆ ಗುರುವಾರ ಮಧ್ಯಾಹ್ನ ಅವಧಿಯಲ್ಲಿ ನಡೆದಿದೆ.

2 ಲಕ್ಷದ ವರೆಗಿನ ಸಾಲ ಪಡೆದ ರೈತರ ಸಾಲ ಮನ್ನಾಕೆ ಕರ್ನಾಟಕ ಸರ್ಕಾರ 2018-19 ರಲ್ಲೇ ಆದೇಶ ನೀಡಿದ್ದರೂ, ಮೂರು ಊರಿನ ಗ್ರಾಮಗಳ ಪೈಕಿ ಕೆಲ ರೈತರಿಗೆ ಸಾಲ ಮನ್ನಾ ಸೌಲಭ್ಯ ನೀಡಿದ ಬ್ಯಾಂಕ್ ಆಡಳಿತ ಮಂಡಳಿ, ಇನ್ನುಳಿದ ರೈತರಿಗೆ ತಮ್ಮ ಆಧಾರ ಕಾರ್ಡ್ ಹಾಗೂ ಜಮೀನು ಪಹಣಿ ಪತ್ರ ಹೊಂದಾಣಿಕೆ ಆಗುತ್ತಿಲ್ಲ ಎಂದು ಸಾಲ ಮನ್ನಾ ತಡೆ ಹಿಡಿದಿದ್ದಾರೆ.

ಈ ಕುರಿತು ಬ್ಯಾಂಕ್ ಎದುರು ಜಮಾಯಿಸಿದ ಜನರು ತಮ್ಮ ಸಾಲ ಮನ್ನಾ ಮಾಡುವಂತೆ ಪಟ್ಟು ಹಿಡಿದು ಕೆ.ವ್ಹಿ.ಜಿ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಮನವಿ ಸ್ವೀಕರಿಸಿದ ಅಧಿಕಾರಿಗಳು ಮೇಲಾಧಿಕಾರಿಗಳ ಜೊತೆ ಮಾತನಾಡಿ ಅವರು ನೀರ್ಣಯದಂತೆ ಆದೇಶ ಪ್ರಕಟಿಸಲು ಸಮಯ ಕೋರಿದ್ದು ರೈತರು ನಿರಾಳರಾಗಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

29/01/2021 02:40 pm

Cinque Terre

17.69 K

Cinque Terre

0

ಸಂಬಂಧಿತ ಸುದ್ದಿ