ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮುತಾಲಿಕ ಜನ್ಮದಿನ: ಆಂಜನೇಯನಿಗೆ ವಿಶೇಷ ಪೂಜೆ

ಧಾರವಾಡ: ಹಿಂದುತ್ವದ ವಿಚಾರಧಾರೆಗಾಗಿ ಹೊರಾಟ ಮಾಡುತ್ತ ಬಂದಿರುವ ಪ್ರಖರ ವಾಗ್ಮಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಜನ್ಮದಿನದ ಅಂಗವಾಗಿ ಧಾರವಾಡ ಲೈನ್ ಬಜಾರ್ ನಲ್ಲಿರುವ ಆಂಜನೇಯನ ದೇವಸ್ಥಾನದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಪ್ರಮೋದ ಮುತಾಲಿಕ್ ಅವರಿಗೆ ಜೈಕಾರ ಹಾಕಿದರು.

ಲೈನ್ ಬಜಾರ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆ ನೆರವೇರಿಸಿದ ಕಾರ್ಯಕರ್ತರು, ಪ್ರಮೋದ ಮುತಾಲಿಕ್ ಅವರ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿ. ಅವರ ಹೋರಾಟ ಇನಷ್ಟು ಪ್ರಖರವಾಗುವ ನಿಟ್ಟಿನಲ್ಲಿ ಸಂಘಟನೆ ಬಲಪಡಿಸಲು ಶ್ರಮಿಸುತ್ತೇವೆ ಎಂದು ಶ್ರೀರಾಮ ಸೇನೆ ಧಾರವಾಡ ಗ್ರಾಮೀಣ ಪ್ರಮುಖ ಪಾಂಡುರಂಗ ತಿಳಿಸಿದರು.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಪ್ರಾಂತ ಅಧ್ಯಕ್ಷ ಈಶ್ವರಗೌಡ ಪಾಟೀಲ್, ಗ್ರಾಮೀಣ ವಿದ್ಯಾರ್ಥಿ ಪ್ರಮುಖ ಮೈಲಾರ ಗುಡ್ಡಪ್ಪನವರ, ಧಾರವಾಡ ನಗರ ಪ್ರಮುಖ ವಿಶ್ವಾಸ, ಆನಂದ ಅಂಬೋರಿ, ಗೋಪಾಲ ಜಾಧವ, ತಿಪ್ಪಣ್ಣ ನಾಯ್ಕರ ಸೇರಿದಂತೆ ಅನೇಕರು ಇದ್ದರು.

Edited By : Manjunath H D
Kshetra Samachara

Kshetra Samachara

24/01/2021 11:34 am

Cinque Terre

22.3 K

Cinque Terre

0

ಸಂಬಂಧಿತ ಸುದ್ದಿ