ಕಲಘಟಗಿ:ಸರಿಯಾಗಿ ಹೆಸರು ವಿಳಾಸವಿಲ್ಲದ ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಪ್ರಕರಣ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತನನ್ನು ಬಸವರಾಜ ನಾಗಪ್ಪ ಮರೇವಾಡ (ಅಂದಾಜು ೫೫ ವರ್ಷದ,ನಿಖರವಾದ ಹೆಸರು ವಿಳಾಸ ತಿಳಿಸದ) ವ್ಯಕ್ತಿ ಧಾರವಾಡ ಗಳಗಿಹುಲಕೂಪ್ಪ ರಸ್ತೆಯ ಹೊಲದ ಪಕ್ಕದಲ್ಲಿ ಅಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುತ್ತಿದ್ದ,ಈತಅನಾರೋಗ್ಯ ದಿಂದ ಬಳಲುತ್ತಿದ್ದು,ಚಿಕಿತ್ಸೆ ಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತು.
ಉಪಚಾರ ಫಲಿಸದೇ ಸಾವನ್ನಪ್ಪಿದ್ದಾನೆ.ಮೃತನ ವಾರಸುದಾರರ ಪತ್ತೆಯಾಗಿಲ್ಲ,ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆರ್ ಎಂ ಶಂಕಿನದಾಸರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Kshetra Samachara
04/01/2021 12:11 pm