ಹುಬ್ಬಳ್ಳಿ: ಚೌಗುಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧ್ಯಕ್ಷರಾಗಿದ್ದ ಲಗಮಣ್ಣಾ ಬಾಬು ಚೌಗುಲೆಯವರು ಶನಿವಾರ (ಡಿ.26) ದಂದು ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮಹಾವಿದ್ಯಾಲಯದ ಶಿಸ್ತು, ಗಾಂಭಿರ್ಯತೆ ಮತ್ತು ಅಭಿವೃದ್ಧಿಗೆ ಕಾರಣಿಭೂತರಾದ ಲಗಮಣ್ಣಾ ಅವರದ್ದು ಕ್ರೀಯಾಶೀಲ ವ್ಯಕ್ತಿತ್ವ , ಮಹಾವಿದ್ಯಾಲಯದ ಸ್ವಚ್ಛತೆ ಮತ್ತು ಯಾವಾಗಲೂ ಅದು ಓರಣವಾಗಿಡಲು ಶ್ರಮಿಸುತ್ತಿದ್ದರು.
ಮಹಾವಿದ್ಯಾಲಯದ ಸರ್ವ ಸಿಬ್ಬಂದಿಯವರ ಮೇಲೆ ಸದಾ ಪ್ರೀತಿ, ವಾತ್ಸಲ್ಯ ತೋರಿಸುತ್ತಿದ್ದ ಶ್ರೀಯುತರು ಎಲ್ಲರ ಮನದಲ್ಲಿ ಮನೆಮಾಡಿದ್ದರು. ಕಾಲೇಜಿಗೆ ಬರುವ ಎಲ್ಲಾ ವಿದ್ಯಾರ್ಥಿಗಳು ಮತ್ತು ಪಾಲಕರ ಜತೆಗೆ ಸಹೃದಯದಿಂದ ಬೆರೆಯುತ್ತಿದ್ದ ಲಗಮಣ್ಣವರ ಸರಳತೆ, ಸೌಹಾರ್ದತೆ, ಸಮಯ ಪ್ರಜ್ಞೆಯನ್ನು ಎಲ್ಲರೂ ನೆನೆಯುತ್ತಾರೆ. ಕಾಲೇಜಿನ ಎಲ್ಲ ಸಭೆ - ಸಮಾರಂಭಗಳಲ್ಲಿ ಮುತುವರ್ಜಿಯಿಂದ ಭಾಗವಹಿಸುತ್ತಿದ್ದರು. ತಮ್ಮ ಇಳಿವಯಸ್ಸಿನಲ್ಲಿಯೂ ಕಾಲೇಜಿನ ಎಲ್ಲ ಮಜಲುಗಳನ್ನು ನಿರಾಯಾಸದಿಂದ ಏರಿ ಎಲ್ಲವನ್ನು ಗಮನಿಸುತ್ತಿದ್ದರು.
Kshetra Samachara
26/12/2020 09:41 pm